ಪ್ರತಾಪ್ ಸಿಂಹ ವಿರುದ್ಧ ಮೈ ಕಾ ಪ್ರೇಮ್ ಕುಮಾರ್ ಆಕ್ರೋಶ

Spread the love

ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷ
ಮೈ ಕಾ ಪ್ರೇಮ್ ಕುಮಾರ್ ಕಿಡಿ ಕಾರಿದ್ದಾರೆ.

ಆಷಾಢ ಶುಕ್ರವಾರ ಮತ್ತು ನಾಡ ದೇವತೆ ಚಾಮುಂಡೇಶ್ವರಿಯ ವರ್ಧಂತಿ ವೇಳೆ ಇಡೀ ಮೈಸೂರಿನ ಜನರ ಭಕ್ತಿ ಭಾವ, ಸಡಗರ, ಸಂಭ್ರಮ, ಅನ್ನದಾನ ಹಾಗೂ ಸಮರ್ಪಣೆಯ ಭಾವಗಳಿರುತ್ತದೆ ಆದರೆ
ಇಂತಹ ಪವಿತ್ರ ಸಂದರ್ಭದಲ್ಲಿ ಮೈಸೂರಿನ ಮಾಜಿ ಸಂಸದರಾದ ಪ್ರತಾಪ್ ಸಿಂಹ ಅವರು ದೇವಾಲಯದ ಮುಂದೆ ನಿಂತು ಮಾಧ್ಯಮಗಳೊಂದಿಗೆ ತಮ್ಮ ಎಂದಿನ ಶೈಲಿಯಲ್ಲಿ ರಾಜಕೀಯ ವಿರೋಧಿಗಳ ವಿರುದ್ಧ ತೀಕ್ಷ್ಣವಾಗಿ ಹರಿಹಾಯ್ದಿದ್ದಾರೆ. ಇದು ರಾಜ್ಯಾದ್ಯಂತ ಚಾಮುಂಡೇಶ್ವರಿಯ ವರ್ಧಂತಿಗಿಂತಲೂ ಸ್ವಲ್ಪ ಹೆಚ್ಚೇ ಸುದ್ದಿ ಆಗಿದೆ

ರಾಜಕೀಯ ಪರ-ವಿರೋಧಗಳು ಏನೇ ಇದ್ದರೂ ವರ್ಧಂತಿ ಸಂದರ್ಭದಲ್ಲಿ ನಾಡ ದೇವತೆಯ ಮುಂದೆ ನಿಂತು ರಾಜಕೀಯ ಕೆಸರೆರಚಾಟ ನಡೆಸುವುದು ಇತಿಹಾಸ ಪ್ರಸಿದ್ಧ ಮೈಸೂರಿಗೆ ಶೋಭೆ ತರುವುದಿಲ್ಲ ಎಂದು ಮೈ ಕಾ ಪ್ರೇಮ್ ಕುಮಾರ್ ಹೇಳಿದ್ದಾರೆ.

ಈ ಸಂದರ್ಭದಲ್ಲಿ ನಾಡ ದೇವತೆಯ ದರ್ಶನ ಪಡೆಯಲು ಮತ್ತು ತಮ್ಮ ಭಕ್ತಿಯನ್ನು ಸಮರ್ಪಿಸಲು ಲಕ್ಷಾಂತರ ಭಕ್ತಾದಿಗಳು ಬೆಟ್ಟದ ಮೇಲಿನ ಚಾಮುಂಡೇಶ್ವರಿ ದೇವಾಲಯಕ್ಕೆ ಆಗಮಿಸಿತ್ತಾರೆ ಅವರ ಮುಂದೆ ಈ ರೀತಿ ರಾಜಕೀಯ ಬೇಕಾ ಎಂದು ಪ್ರಶ್ನಿಸಿದ್ದಾರೆ.

ಆದ್ದರಿಂದ ರಾಜಕೀಯ ಕೆಸರೆರಚಾಟಕ್ಕೆ ಮೊದಲು ಸಮಯ, ಸಂದರ್ಭ, ಸ್ಥಳಗಳ ಬಗ್ಗೆ ಅರಿತುಕೊಳ್ಳುವ ಪ್ರಜ್ಞಾವಂತಿಕೆ ಬೆಳೆಸಿಕೊಳ್ಳಲಿ ಎಂದು ಪ್ರತಾಪ್ ಸಿಂಹ ಹಾಗೂ ಎಲ್ಲ ರಾಜಕಾರಣಿಗಳಲ್ಲಿ ಮೈಸೂರಿನ ಜನತೆ ಹಾಗೂ ಚಾಮುಂಡೇಶ್ವರಿಯ ಭಕ್ತರ ಪರವಾಗಿ ಮನವಿ ಮಾಡಿಕೊಳ್ಳುತ್ತಿದ್ದೇವೆ‌
ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷ
ಮೈ.ಕಾ.ಪ್ರೇಮ್ ಕುಮಾರ್ ತಿಳಿಸಿದ್ದಾರೆ.