ಒತ್ತಡ ನಿವಾರಣೆಗೆ ಸಂಗೀತ ಸಹಕಾರಿ-ಡಾ.ಕೆ.ಆರ್. ಮಂಜುನಾಥ್

Spread the love

ಮೈಸೂರು: ಮಾನಸಿಕ ಒತ್ತಡ ನಿವಾರಣೆಗೆ ಸಂಗೀತ ಸಹಕಾರಿ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ವೈದ್ಯ ಡಾ.ಕೆ.ಆರ್. ಮಂಜುನಾಥ್ ಹೇಳಿದರು.

ನಕ್ಷತ್ರ ಅಕಾಡೆಮಿ ಆಫ್ ಆರ್ಟ್ಸ್ ಮಲ್ಟಿ ಟ್ಯಾಲೆಂಟ್ ಕ್ರಿಯೇಟರ್ಸ್ ವತಿಯಿಂದ ಬುಧವಾರ ಏರ್ಪಡಿಸಿದ್ದ ಸುಗಮ ಸಂಗೀತ ತರಬೇತಿ ಉದ್ಘಾಟನೆ ಹಾಗೂ ಕಲಾವಿದರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲೂ ಕೆಲಸದ ಒತ್ತಡ ಇದೆ, ಆರೋಗ್ಯದ ದೃಷ್ಟಿಯಿಂದ ಇದನ್ನು ಕಡಿಮೆ ಮಾಡಿಕೊಳ್ಳಬೇಕು,ಸಂಗೀತ ಕೇಳಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸಮಾಜದಲ್ಲಿ ಇತರರೊಂದಿಗೆ ಬೆರೆಯಲು ಅವಕಾಶ ಸಿಗುತ್ತದೆ,ಆದ್ದರಿಂದ ಇಲ್ಲಿ ಗುಣಮಟ್ಟದ ತರಬೇತಿ ನೀಡಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ಪೊಲೀಸ್ ಅಕಾಡೆಮಿಯ ಡಿವೈಎಸ್ಪಿ ಕುಮಾರ್ ಮಾತನಾಡಿ, ಅಕಾಡೆಮಿಯಲ್ಲೂ ಪೊಲೀಸರಿಗೆ ಒತ್ತಡ, ವೈಯಕ್ತಿಕ ಹಾಗೂ ಆರ್ಥಿಕ
ನಿರ್ವಹಣೆ ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.

ಪ್ರತಿಯೊಂದು ಕೆಲಸದಲ್ಲೂ ಒತ್ತಡ ಸಹಜ. ಸಂಗೀತ, ಪ್ರಕೃತಿ ವೀಕ್ಷಣೆ, ಪ್ರವಾಸ ಸೇರಿದಂತೆ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡರೆ ಒತ್ತಡದಿಂದ ಹೊರಬರಲು ಸಾಧ್ಯ ಎಂದು ಹೇಳಿದರು

ಗಾಯಕರಾದ ಆಶಾ ಮಹದೇವ್, ಪ್ರೇಮಲತಾ, ಭಾರ್ಗವಿ, ಪ್ರಿಯಾ, ಡಾ. ಸೌಮ್ಯಾ, ಗೌರಿ ಒಸ್ಲಾಲ್, ಅಪೂರ್ವ, ಗುರುರಾಜ್, ಕುಮಾರಸ್ವಾಮಿ, ಆರ್. ಲಕ್ಷ್ಮಣ್, ಆದಿಲ್ ಪಾಷ,
ನಾರಾಯಣಸ್ವಾಮಿ, ಪ್ರೇಮ್ ಅವರುಗಳನ್ನು ಇದೇ ವೇಳೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾ‌ರ್,ಕೆ ಎಂ ಪಿ ಕೆ
ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಮನೋಶಾಸ್ತ್ರಜ್ಞೆ ಡಾ. ರೇಖಾ ಮನಶಾಂತಿ,ತರಬೇತಿ ಸಂಯೋಜಕ, ಗಾಯಕ ಅಮ್ಮ ರಾಮಚಂದ್ರ, ಸ್ತ್ರೀರೋಗ ತಜ್ಞೆ ಡಾ.ರೇಖಾ ಅರುಣ್,
ನಕ್ಷತ್ರ ಅಕಾಡೆಮಿ ಆಫ್ ಆರ್ಟ್ಸ್ ಮಲ್ಟಿ ಟ್ಯಾಲೆಂಟ್ ಕ್ರಿಯೇಟರ್ಸ್
ಅಧ್ಯಕ್ಷೆ ಮೋಹನ ಮಾಧುರ್ಯ, ಶೋಭಾರಾಣಿ ಮತ್ತಿತರರು ಪಾಲ್ಗೊಂಡಿದ್ದರು.