ಕುಡಿದ ಮತ್ತಿನಲ್ಲಿ ತಂದೆ,ಅಣ್ಣನನ್ನು ಕೊಂದ ಪಾಪಿ ತಮ್ಮ

Spread the love

(ವರದಿ:ಸಿಬಿಎಸ್)

ಹಾಸನ: ಕುಡಿದ ಮತ್ತಿನಲ್ಲಿ ತಂದೆ ಹಾಗೂ ಅಣ್ಣನನ್ನು ಪಾಪಿ ತಮ್ಮ ಕೊಲೆ ಮಾಡಿರುವ ಹೇಯ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನಲ್ಲಿ ನಡೆದಿದೆ.

ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕಿನ, ಗಂಗೂರು ಗ್ರಾಮದಲ್ಲಿ ಘಟನೆ ನಡೆದಿದ್ದು,ದೇವೇಗೌಡ (70), ಮಂಜುನಾಥ್ (50) ಕೊಲೆಯಾದ ನತದೃಷ್ಟ ತಂದೆ,ಮಗ

ಮೋಹನ್ (47) ಎಂಬಾತ ತಂದೆ ಹಾಗೂ ಅಣ್ಣನನ್ನು ಕೊಲೆ ಮಾಡಿದ ಆರೋಪಿ.

ದೇವೇಗೌಡರಿಗೆ ಮಂಜುನಾಥ್ ಹಾಗೂ ಮೋಹನ್ ಇಬ್ಬರು ಗಂಡು ಮಕ್ಕಳು.ವಯಸ್ಸಾಗಿದ್ದರೂ ಇಬ್ಬರಿಗೂ ಮದುವೆ‌ ಆಗಿರಲಿಲ್ಲ.

ಒಂದೇ ಮನೆಯಲ್ಲಿ ಪ್ರತ್ಯೇಕವಾಗಿ ವಾಸವಿದ್ದ ಮೋಹನ್.ಮಂಜುನಾಥ್
ತಂದೆ-ತಾಯಿ ಜೊತೆ ವಾಸವಿದ್ದರು.

ಇತ್ತೀಚೆಗೆ‌ ಮೋಹನ್ ಕುಡಿತದ ದಾಸನಾಗಿದ್ದ.
ಆಸ್ತಿ ವಿಚಾರಕ್ಕೆ ಆಗಾಗ ಮನೆಯಲ್ಲಿ ಜಗಳ ನಡೆಯುತ್ತಿತ್ತು.

ಇದೇ‌ವಿಚಾರವಾಗಿ ನಿನ್ನೆ ಕೂಡಾ ಜಗಳ ನಡೆದಿತ್ತು,ಕುಡಿದ ಮತ್ತಿನಲ್ಲಿ ‌ತಂದೆ ಹಾಗೂ‌ ಅಣ್ಣ ಇಬ್ಬರನ್ನು ಬರ್ಬರಬಾಗಿ ಹತ್ಯೆಗೈದ ತಮ್ಮ ಮೋಹನ್ ಪರಾರಿಯಾಗಿದ್ದಾನೆ.

ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.