ಅತ್ತೆಯನ್ನೇ ಕೊಂದು ತುಂಡು ಮಾಡಿ‌ ಎಸೆದ ಅಳಿಯ:ಡಾಕ್ಟರ್ ಸೇರಿ ನಾಲ್ವರು ಅಂದರ್

Spread the love

ತುಮಕೂರು: ಜಿಲ್ಲೆಯ ಕೊರಟಗೆರೆಯಲ್ಲಿ ಅಳಿಯ ದಂತ ವೈದ್ಯ ಅತ್ತೆಯನ್ನೇ ಭೀಕರವಾಗಿ ಕೊಲೆ ಮಾಡಿ ಮೃತ ದೇಹ ತುಂಡರಿಸಿದ್ದು ಇಡೀ ಪಟ್ಟಣ ಬೆಚ್ಚಿಬಿದ್ದತ್ತು.

ಲಕ್ಷ್ಮೀದೇವಮ್ಮ ಕೊಲೆಯಾದ ಅತ್ತೆ‌.ಆಕೆಯ
ಅಳಿಯನೇ ಈ ಕೃತ್ಯ ನಡೆಸಿದ್ದೆಂದು ಗೊತ್ತಾಗಿದ್ದು ಈಗ ಕಂಬಿ ಎಣಿಸುತ್ತುದ್ದಾನೆ.

ವೃತ್ತಿಯಲ್ಲಿ ದಂತ ವೈದ್ಯನಾದ ಡಾ. ರಾಮಚಂದ್ರ ತನ್ನ ಸ್ನೇಹಿತ ಸತೀಶ್ ಹಾಗೂ ಕಿರಣ ಎಂಬುವರ ಜೊತೆ ಸೇರಿ ಅತ್ತೆಯನ್ನು ಹತ್ಯೆ ಮಾಡಿದ್ದಾನೆ.

ಮೃತ ಲಕ್ಷ್ಮೀದೇವಮ್ಮ ತನ್ನ ಮಗಳನ್ನೇ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರಚೋದಿಸುತಿದ್ದಳು ಎಂಬ ಆರೋಪ ಕೇಳಿಬಂದಿದ್ದು ಈ ವಿಷಯ ಗೊತ್ತಾಗಿಯೇ ಅಳಿಯ ಡಾ.ರಾಮಚಂದ್ರ ಅತ್ತೆಯನ್ನ ಕೊಂದು ತುಂಡು,ತುಂಡು ಮಾಡಿ ಬಿಸಾಡಿ ಆಕ್ರೋಶ ಶಮನ ಮಾಡಿಕೊಂಡಿದ್ದ.

ಕೋಳಾಲದಲ್ಲಿ ಇರುವ ಸ್ನೇಹಿತ ಸತೀಶ್ ಎಂಬಾತನ ಫಾರ್ಮ್ ಹೌಸ್‌ನಲ್ಲಿ ಕೊಲೆ ಮಾಡಿ ದೇಹದ ಭಾಗಗಳನ್ನು ಪೀಸ್ ಪೀಸ್ ಮಾಡಿ ಎಸೆದಿದ್ದರು.

ಕೊಲೆ ಮಾಡಿ ಪಾಪ ತೊಳೆದುಕೊಳ್ಳಲು ಆರೋಪಿಗಳು ಧರ್ಮಸ್ಥಳ ಯಾತ್ರೆಗೆ ಹೋಗಿದ್ದರು.

ಲಕ್ಷ್ಮೀದೇವಮ್ಮನ ಕೊಲೆ ಆದರೂ ಅಳಿಯ ಊರಲ್ಲಿ ಇಲ್ಲದಿರುವುದು ಅನುಮಾನಕ್ಕೆಡೆ ಮಾಡಿತ್ತು.

ಇದೇ ಅನುಮಾನದಲ್ಲೇ ಅಳಿಯ ಡಾ.ರಸಮಚಂದ್ರನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮಾಡಿದಾಗ ವಿಷಯ ಗೊತ್ತಾಗಿದೆ.

ಈ ಕೊಲೆ ಸಂಬಂಧ ಕೊರಟಗೆರೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ತನಿಖೆ ಚುರುಕುಗೊಳಿಸಿದ್ದಾರೆ.