ಅಂಬೇಡ್ಕರ್ ಬಗೆಗಿನ ಅಮಿತ್ ಶಾ ಅವಹೇಳನ ಭಾಷಣ:ಮುಖ್ಯಮಂತ್ರಿ ಚಂದ್ರು ಖಂಡನೆ

Spread the love

ಬೆಂಗಳೂರು: ಸಂಸತ್ತಿನಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಭಾಷಣ ಖಂಡನೀಯ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಅಮಿತ್ ಶಾ ಅವರನ್ನ ರಾಷ್ಟ್ರದ ಜನತೆ ಎಂದಿಗೂ ಕ್ಷಮಿಸುವುದಿಲ್ಲ, ಕೂಡಲೇ ರಾಜೀನಾಮೆ ನೀಡಬೇಕು ಎಂದು ಅಗ್ರಹಿ ಸಿದರು.

ದೇಶದ ಕೋಟ್ಯಾಂತರ ಭಾರತೀಯರಿಗೆ ಅಂಬೇಡ್ಕರ್ ಅವರು ದೈವ ಸಮಾನರೆಂದು ಪೂಜ್ಯ ಭಾವನೆಯಿಂದ ಅವರ ಆದರ್ಶಗಳನ್ನು ಪಾಲಿಸಿಕೊಂಡು ಬಂದಿದ್ದಾರೆ.

ಸಂವಿಧಾನ ಉಳಿವಿಗಾಗಿ ಆದರ್ಶ ಬದುಕನ್ನು ನಡೆಸುತ್ತಿರುವ ಭಾರತೀಯರಿಗೆ ಅಮಿತ್ ಶಾ ಅವರ ಸಂಸತ್ತಿನ ಭಾಷಣ ಯಾವುದೇ ನಾಗರೀಕ ಸಮಾಜ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಶಾ ಅಂತರಾಳದಲ್ಲಿ ಅಂಬೇಡ್ಕರ್ ಅವರ ಬಗೆಗಿನ ಅಸಮ್ಮತಿ ಅವರ ಭಾಷಣದಲ್ಲಿ ಸ್ಪಷ್ಟವಾಗಿ ಅನಾವರಣಗೊಂಡಿದೆ, ಕೂಡಲೇ ಕೇಂದ್ರದ ಗೃಹ ಸಚಿವರು ರಾಜೀನಾಮೆ ಕೊಡಲೇಬೇಕು ಎಂದು ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು.