ಕಾಡುಕೋಣ ದಾಳಿಗೆ ಕೂಲಿ ಕಾರ್ಮಿಕ ಬಲಿ

ಚಿಕ್ಕಮಗಳೂರು: ಕಾಡುಕೋಣ ದಾಳಿ ಮಾಡಿದ್ದರಿಂದ ಕೂಲಿಕಾರ್ಮಿಕ ಬಲಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.

ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿಯಲ್ಲಿ ಕಾಡುಕೋಣ ದಾಳಿಗೆ ರಮೇಶ್ (52) ಎಂಬವರು ಬಲಿಯಾಗಿದ್ದಾರೆ.

ಅವರು ತೋಟದಲ್ಲಿ ಕೆಲಸ ಮಾಡುತ್ತಿದ್ದ‌ ವೇಳೆ ಏಕಾಏಕಿ ಕಾಡುಕೋಣ ದಾಳಿ ಮಾಡಿದೆ

ವಿಷಯ ತಿಳಿದು ಬಾಳೂರು ಠಾಣೆ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆನೆ ದಾಳಿ, ಚಿರತೆ ದಾಳಿ ಹುಲಿಗಳ ದಾಳಿ ನಡುವೆ ಈಗ ಕಾಡುಕೋಣಗಳ ದಾಳಿ ಹೆಚ್ಚಾಗಿ ಬಿಟ್ಟಿದೆ. ಸದಾ ರಸ್ತೆಯಲ್ಲಿ ಹಾಗೂ ಎಸ್ಟೇಟ್ ‌ಬಳಿ ಕಾಡುಕೋಣಗಳು ಸಂಚರಿಸುತ್ತವೆ. ಇದರಿಂದ ಕಾಫಿ ತೋಟಕ್ಕಾಗಲಿ ಹೊರಗಡೆ ಬರಲಾಗಲಿ ಅಂಜುವಂತಾಗಿದೆ.ಕಾಡು ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಸರ್ಕಾರವನ್ನು ಆಗ್ರಹಿಸಿದ್ದಾರೆ.