ಮುದ್ದೆಬಿಹಾಳ: ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಾಳೆ ಸ್ವಾಮಿ ವಿವೇಕಾನಂದ ಅವರ 163ನೇ ಜಯಂತ್ಯೋತ್ಸವದ ಪ್ರಯುಕ್ತ ಸ್ವಾಮಿ ವಿವೇಕಾನಂದ ರಾಷ್ಟ್ರ ಮತ್ತು ರಾಜ್ಯ ಸದ್ಭಾವನಾ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಸಮಾರಂಭವು ಮುದ್ದೇಬಿಹಾಳ ಶ್ರೀ ಸಿದ್ದೇಶ್ವರ ವ್ಹಿಬಿಸಿ ಹೈಸ್ಕೂಲ್ ಮೈದಾನದ ಆವರಣದಲ್ಲಿ ನಾಳೆ ಸಂಜೆ 5 ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಕರ್ನಾಟಕ ರಾಜ್ಯ ಯುವ ಸಂಘಟನೆಗಳ ಒಕ್ಕೂಟ, ಬೆಂಗಳೂರು. ವಿಜಯಪುರ ಜಿಲ್ಲಾ ಹಾಗೂ ತಾಲೂಕು ಘಟಕ ಮುದ್ದೇಬಿಹಾಳ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಪುರ. ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕ, ಜಾನಪದ ಯುವ ಬ್ರಿಗೇಡ್ ಹಾಗೂ ಸಾಧನ ಮಹಿಳಾ ಒಕ್ಕೂಟ ಮುದ್ದೆಬಿಹಾಳ ಮತ್ತು ಧರ್ಮ ಯುದ್ಧ ದಿನಪತ್ರಿಕಾ ಬಳಗ ಮುದ್ದೇಬಿಹಾಳ ಇವರ ಸಂಯುಕ್ತ ಆಶ್ರಯದಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಒಟ್ಟು 13 ಮಂದಿಗೆ 2025 ನೇ ಸಾಲಿನ ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.ಅಲ್ಲದೆ 26 ಮಂದಿಗೆ 2025 ನೇ ಸಾಲಿನ ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನ ಪ್ರಶಸ್ತಿ ನೀಡಲಾಗುತ್ತದೆ.
ಇದೇ ವೇಳೆ ರಾಷ್ಟ್ರೀಯ ಜಾನಪದ ಶ್ರೀ ಪ್ರಶಸ್ತಿ, ರಾಷ್ಟ್ರೀಯ ಯುವ ಜಾನಪದ ಶ್ರೀ ಪ್ರಶಸ್ತಿ ನೀಡಲಾಗುತ್ತಿದೆ.
ಸಮಾರಂಭದ ದಿವ್ಯ ಸಾನಿಧ್ಯವನ್ನು ಸುಕ್ಷೇತ್ರ ಸಿದ್ದನಕೊಳ್ಳ ನಿರಂತರ ದಾಸೋಹ ಹಾಗೂ ಕಲಾ ಪೋಷಕರ ಮಠದ ಡಾ ಶ್ರೀ ಶಿವಕುಮಾರ ಮಹಾಸ್ವಾಮಿಗಳು ವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್ ತಂಗಡಗಿ ನೆರವೇರಿಸುವರು,ಅಧ್ಯಕ್ಷತೆಯನ್ನು ಶಾಸಕರಾದ ಸಿ ಎಸ್ ನಾಡಗೌಡ್ರ(ಅಪ್ಪಾಜಿ) ವಹಿಸುವರು.
ಧರ್ಮ ಯುದ್ದ ದಿನದರ್ಶಿಕೆ ಲೋಕಾರ್ಪಣೆಯನ್ನು ಶಾಸಕ ವಿಜಯಾನಂದ ಕಾಶಪ್ಪನವರ ಮಾಡುವರು. ಪ್ರಶಸ್ತಿ ಪ್ರದಾನವನ್ನು ವಿಜಯಪುರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ನೀಡುವರು.
ಸಾಂಸ್ಕೃತಿಕ ಯುವ ವೈಭವ ಉದ್ಘಾಟನೆಯನ್ನು ಚಲನಚಿತ್ರ ನಟ ಗುರುರಾಜ ಹೊಸಕೋಟೆ ನೆರವೇರಿಸುವರು. ಶ್ರೀ ಸಿದ್ದೇಶ್ವರ ಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪ ನಮನವನ್ನು ವಿಜಯಪುರ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಪ್ರಭುಗೌಡ ಚ.ದೇಸಾಯಿ ಮತ್ತು ಮುದ್ದೇಬಿಹಾಳ ಸಮಾಜ ಸೇವಕ ನೇತಾಜಿ ಆರ್ ನಲವಡೆ ನೆರವೇರಿಸುವರು.
ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಮುದ್ದೇಬಿಹಾಳ ಸಮಾಜ ಸೇವಕರಾದ ಸಂಗೀತ ನಾಡಗೌಡ ಹಾಗೂ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಕಿತ್ತೂರು ಕರ್ನಾಟಕ ಅಧ್ಯಕ್ಷರಾದ ಕಾಶಿಬಾಯಿ ರಾಂಪೂರ ನೆರವೇರಿಸಲಿದ್ದಾರೆ.