ಶ್ರೀ ನಂದಿಕೇಶ್ವರ ನಾಟಕ ಸಂಘದ41ನೇ ವಾರ್ಷಿಕೋತ್ಸವ: ಮುದುಕನ ಮದುವೆ ಉಚಿತ ನಾಟಕ ಪ್ರದರ್ಶನ

Spread the love

ಮೈಸೂರು: ಮಂಗಳೂರಿನ
ಶ್ರೀ ನಂದಿಕೇಶ್ವರ ನಾಟಕ ಸಂಘದ
41ನೇ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ.

ಈ ಸಂಘವು ಹಲವಾರು ಕಲಾವಿದರನ್ನು ಕಟ್ಟಿಕೊಂಡು ಕರ್ನಾಟಕ, ಮಹಾರಾಷ್ಟ್ರ, ಕೇರಳ, ಆಂಧ್ರ ಮತ್ತಿತರೆಡೆ ಹಲವಾರು ಪ್ರದರ್ಶನಗಳನ್ನು ನೀಡಿ ಸೈ ಎನಿಸಿಕೊಂಡಿದೆ.

ಚಿತ್ರರಂಗದ ಹಲವಾರು ಕಲಾವಿದರನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಪರಿಚಯಿಸಿ, ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿ, 1994ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದಲ್ಲಿ ಸಂಘದ 41ನೇ ವರ್ಷದ ಸವಿನೆನಪಿಗಾಗಿ ಮೈಸೂರಿನ ಪುರ ಭವನದಲ್ಲಿ ಜನವರಿ 8ರ ಬುಧವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಕರೋಕೆ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸಂಚಾಲಕರಾದ ಶೋಭಾ ರೈ, ರಾಘವೇಂದ್ರ ರೈ ತಿಳಿಸಿದರು.

ಅಲ್ಲದೆ 9 ರಂದು ಗುರುವಾರ ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ ದಿ| ಪಿ. ಬಿ. ದುತ್ತರಗಿ ವಿರಚಿತ ಮುದುಕನ ಮದುವೆ ಎಂಬ ಹಾಸ್ಯ ಉಚಿತ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

ಶ್ರೀ ಯೋಗ ನರಸಿಂಹ ಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಎನ್. ಶ್ರೀನಿವಾಸ್,ಶಾಸಕ ಟಿ. ಎಸ್. ಶ್ರೀವತ್ಸ, ಶ್ರೀರಾಮೇ ಗೌಡ್ರು ಹಿರಿಯ ಕಲಾವಿದರಾದ ರಾಮೇ ಗೌಡ್ರು ಉದ್ಘಾಟನೆ ನೆರವೇರಿಸಲಿದ್ದಾರೆ.

ನಿವೃತ್ತ ಲೆಕ್ಕಪರಿಶೋಧನಾ ಅಧಿಕಾರಿಗಳು ಹಾಗೂ ನಾಟಕ ರಚನೆಕಾರರು ಕಲಾವಿದರಾದ ಎಸ್. ಎಸ್. ಪುಟ್ಟೆ ಗೌಡ್ರು ಅಧ್ಯಕ್ಷತೆ ವಹಿಸುವರು.ಅಲ್ಲದೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ವಿವರಿಸಿದರು.