ಮೈಸೂರು: ಧಾರವಾಡ ಹೈಕೋರ್ಟ್ ಮುಡಾ ಕೇಸನ್ನು ಸಿಬಿಐ ತನಿಖೆಗೆ ವಹಿಸಲು ನಿರಾಕರಿಸಿರುವುದು ಸತ್ಯಕ್ಕೆ ಜಯ ಸಿಕ್ಕಿದಂತಾಗಿದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರಬಾದ್ ನಟರಾಜ್ ಸಂತಸ ವ್ಯಕ್ತಪಡಿಸಿದ್ದಾರೆ.
ಸುಮಾರು 40 ವರ್ಷದ ರಾಜಕಾರಣದ ಇತಿಹಾಸದಲ್ಲಿ ಸಿದ್ದರಾಮಯ್ಯನವರು ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆಸಿಕೊಂಡು ಬಂದಿದ್ದಾರೆ. ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಗಳಾಗಿ, ಉಪಮುಖ್ಯಮಂತ್ರಿಗಳಾಗಿ, ಸಚಿವರಾಗಿ ರಾಜ್ಯಕ್ಕೆ ಮತ್ತು ವಿಶೇಷವಾಗಿ ಮೈಸೂರಿಗೆ ಗಣನೀಯ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ, ಇಂತಹ ಧೀಮಂತ ನಾಯಕನ ವಿರುದ್ಧ ಬಿಜೆಪಿಯವರು ಮತ್ತು ಕಾಣದ ಕೈಗಳು ಏನೇ ಪಿತೂರಿ ಮಾಡಿದರೂ ಕೊನೆಗೆ ಸತ್ಯಕ್ಕೆ ಜಯವಾಗಲಿದೆ ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಧಾರವಾಡ ಹೈಕೋರ್ಟ್ ತೀರ್ಪು ಎಂದು ನಜರಬಾದ್ ನಟರಾಜ್ ಹೇಳಿದ್ದಾರೆ.
ಸಿಬಿಐ ತನಿಖೆ ಕೋರಿ ಸಲ್ಲಿಸುದ್ದ ಅರ್ಜಿ ವಜಾ ಮಾಡಿರುವುದು ಮತ್ತು ಲೋಕಾಯುಕ್ತ ತನಿಖಾ ಸಂಸ್ಥೆಯು ಸಿದ್ಧರಾಮಯ್ಯ ಅವರ ವಿರುದ್ಧ ಪಕ್ಷಾತೀತವಾಗಿ ತನಿಖೆ ನಡೆಸಿದೆ ಅದರಲ್ಲಿ ಯಾವುದೇ ಪ್ರಭಾವ ಇಲ್ಲ ಎಂದು ಹೇಳಿರುವುದು ಸತ್ಯವನ್ನು ಎತ್ತಿ ಹಿಡಿಯುವಂತಿದೆ ಎಂದು ನಜರಬಾದ್ ನಟರಾಜ್ ತಿಳಿಸಿದ್ದಾರೆ.