ಮುಡಾ ಕೇಸು ಸಿಬಿಐ ತನಿಖೆಗೆ ವಹಿಸಲು ಕೋರ್ಟ್‌ ನಿರಾಕರಣೆ: ಸಿದ್ದುಗೆ ಬಿಗ್‌ ರಿಲೀಫ್‌

Spread the love

ಧಾರವಾಡ: ಮುಡಾ ಕೇಸನ್ನು ಸಿಬಿಐ ತನಿಖೆಗೆ ವಹಿಸಲು ಧಾರವಾಡ ಹೈಕೋರ್ಟ್‌ ನಿರಾಕರಿಸಿದ್ದು,ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ.

ಸಧ್ಯಕ್ಕೆ ಸಿಎಂ ಸಿದ್ದರಾಮಯ್ಯ ಸಿಬಿಐ ತನಿಖೆಯಿಂದ ಪಾರಾಗಿದ್ದಾರೆ.

ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಶುಕ್ರವಾರ ವಿಚಾರಣೆ ನಡೆಸಿದ ಹೈಕೋರ್ಟ್‌ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ ಅರ್ಜಿ ವಜಾ ಮಾಡಿದೆ. ಸ್ನೇಹಮಯಿ ಕೃಷ್ಣ ಪರ ಮಣಿಂದರಸಿಂಗ್ ವಾದ ಮಂಡಿಸಿದ್ದರು.

ಲೋಕಾಯುಕ್ತ ಸ್ವತಂತ್ರ ತನಿಖಾ ಸಂಸ್ಥೆ ಅಲ್ಲ ಎಂದು ಹೇಳಲು ಆಗುವುದಿಲ್ಲ, ಲೋಕಾಯುಕ್ತ ಪೊಲೀಸ್ ತನಿಖೆಯಲ್ಲಿ ತಾರತಮ್ಯ ಇದೆ‌ ಎಂದು ಹೇಳಲು ಆಧಾರ ಇಲ್ಲ,ಅದೊಂದು ಸ್ವತಂತ್ರ ತನಿಖಾ ಸಂಸ್ಥೆ. ಲೋಕಾ ತನಿಖೆ ಅಸಮರ್ಪಕ ಅಲ್ಲ ಎಂದು ಹೇಳಲು ಆಗಲ್ಲ. ಹೀಗಾಗಿ, ಸಿಬಿಐಗೆ ಇದನ್ನ ಕೊಡಲು ಹೈಕೋರ್ಟ್‌ ನಿರಾಕರಿಸಿದೆ.

ಸಿದ್ದರಾಮಯ್ಯ ಅವರ ವಿರುದ್ಧ ಲೋಕಾಯುಕ್ತ ತನಿಖೆ ಪಕ್ಷಾತೀತ, ನಿಷ್ಪಕ್ಷಪಾತ ಅಥವಾ ಸಿಬಿಐ ತನಿಖೆಗೆ ನಿರ್ದೇಶಿಸಲು ಕಳಪೆಯಾಗಿದೆ ಎಂದು ದಾಖಲೆಯಲ್ಲಿರುವ ವಸ್ತು ವಿಷಯ ಸೂಚಿಸುವುದಿಲ್ಲ. ಪರಿಣಾಮವಾಗಿ ಸಿಬಿಐ ತನಿಖೆಯ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಏಕಸದಸ್ಯ ಪೀಠದ ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ.