ಮೈಸೂರು: ಮುಡಾದಲ್ಲಿ 50:50 ಅನುಪಾತದಲ್ಲಿ ನೀಡಲಾಗಿರುವ ಸೈಟ್ಗಳನ್ನು ರದ್ದು ಮಾಡಬೇಕೆಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ನೀಡಿದ್ದೇನೆ ಶಾಸಕ ಶ್ರೀವತ್ಸ ತಿಳಿಸಿದ್ದಾರೆ.
1,400ಕ್ಕೂ ಹೆಚ್ಚು 50:50 ಅನುಪಾತದ ಸೈಟ್ಗಳಿವೆ ಎಂಬ ವದಂತಿಗಳು ಹರಡಿವೆ,ಆ ಎಲ್ಲ ಸೈಟ್ಗಳನ್ನು ಮುಡಾ ಆಸ್ತಿ ಎಂದು ಇ.ಸಿ.ಯಲ್ಲಿ ಬರುವ ಹಾಗೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಸಬ್ ರಿಜಿಸ್ಟರ್ ಕಚೇರಿಯಲ್ಲಿ ಈ ಅನುಪಾತದ ಯಾವುದೇ ಸೈಟ್ ಅನ್ನು ಎರಡನೇ ಸಲ ನೊಂದಣಿ ಮಾಡಿಕೊಳ್ಳಬಾರದು ಎಂದು ಸುತ್ತೋಲೆ ಹೊರಡಿಸಿ ಎಂದು ಕೋರಿದ್ದೇನೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದ ಟೆಕ್ನಿಕಲ್ ಕಮಿಟಿ ವರದಿಯನ್ನು ಆದಷ್ಟು ಬೇಗ ಜಾರಿಗೆ ತಂದು ಸಂಬಂಧಪಟ್ಟವರನ್ನು ತನಿಖೆಗೆ ಒಳಪಡಿಸಬೇಕು. ಇಬ್ಬರು ಮುಡಾ ಕಮಿಷನರ್ಗಳನ್ನು ಇನ್ನೂ ಕೂಡ ಉಳಿಸಿಕೊಂಡಿದ್ದಾರೆ, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಈಗಾಗಲೇ ಮುಡಾ ಅಧ್ಯಕ್ಷರ ತಲೆ ದಂಡ ಆಗಿದೆ. ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ರಾಜೀನಾಮೆ ನೀಡಿದ್ದೇನೆ ಎಂದು ಅವರೇ ಹೇಳಿದ್ದಾರೆ. ಅವರಿಗೆ ಬರುವ ಸೂಚನೆ ಮುಡಾದಲ್ಲಿನ ಇಬ್ಬರು ಕಮಿಷನರ್ಗೆ ಏಕೆ ಬರುವುದಿಲ್ಲ ಎಂದು ಶ್ರೀವತ್ಸ ಪ್ರಶ್ನಿಸಿದ್ದಾರೆ.
ಸಿಎಂ ಮತ್ತು ನಗರಾಭಿವೃದ್ಧಿ ಸಚಿವರನ್ನು ಆ ಇಬ್ಬರು ಕಮಿಷನರ್ಗಳು ನೀವು ನಮ್ಮ ಹೆಸರು ಹೇಳಿದರೆ ನಾವು ನಿಮ್ಮ ಭಷ್ಟಾಚಾರಗಳನ್ನು ಹೊರತರುತ್ತೇವೆ ಎಂದು ಹೆದರಿಸುತ್ತಿದ್ದಾರೆ ಎಂಬ ವಿಷಯ ಕೇಳಿ ಬರುತ್ತಿವೆ. ಅದಕ್ಕಾಗಿ ಕಮಿಷನರ್ಗಳನ್ನು ಮುಟ್ಟಿಲ್ಲ ಎಂದು ಕಾಣಿಸುತ್ತಿದೆ. ಈ ಎಲ್ಲ ಕಾರಣಗಳಿಂದ ತಕ್ಷಣವೇ ತನಿಖೆ ನಡೆಸಬೇಕು ಎಂದು ಒತ್ತಾಯುಸಿದ್ದೇನೆ ಶಾಸಕರು ತಿಳಿಸಿದ್ದಾರೆ.