ಮೈಸೂರು: ಸಂಸದರ ಕ್ರೀಡಾ ಮಹೋತ್ಸವದ ಅಂಗವಾಗಿ ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನೇತೃತ್ವದಲ್ಲಿ ಸಂಸದರ ಬ್ಯಾಡ್ಮಿಂಟನ್ ಕಪ್ ಪಂದ್ಯಾವಳಿ ನ.15 ರಂದು ನಡೆಯಲಿದೆ.
ಈ ಪಂದ್ಯಾವಳಿಯ ಪೋಸ್ಟರ್ ಅನ್ನು ಯದುವೀರ್ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.
ಮೈಸೂರಿನ ಬೋಗಾದಿ ಎರಡನೇ ಹಂತದ ರಾಜರಾಜೇಶ್ವರಿ ನಗರದಲ್ಲಿರುವ ಸ್ಫೋರ್ಟ್ಸ್ ಪಾರ್ಕ್‌ನಲ್ಲಿ ಈ ಪಂದ್ಯಾವಳಿ ನಡೆಯಲಿದೆ.
ಮೈಸೂರಿನ ಕ್ರೀಡಾಸಕ್ತರು ಈ ಸದವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪೋಸ್ಟರ್ ಬಿಡುಗಡೆ ವೇಳೆ ಮನವಿ ಮಾಡಿದರು.
ಜ್ಯೂನಿಯರ್, ಸೀನಿಯರ್ ವಿಭಾಗದಲ್ಲಿ ಪಂದ್ಯಗಳು ನಡೆಯಲಿವೆ.
ಬಾಲಕ-ಬಾಲಕಿಯರಿಗಾಗಿ ಮೂರು ವಿಭಾಗದಲ್ಲಿ ಹಾಗೂ ಸೀನಿಯರ್‌ನಲ್ಲಿ ಪುರುಷರು ಮತ್ತು ಮಹಿಳೆಯರ ವಿಭಾಗದಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿದೆ.
ನವೆಂಬರ್ 15ರಂದು ನಡೆಯಲಿರುವ ಪಂದ್ಯಗಳಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಳ್ಳಲು ನವೆಂಬರ್ 14ರಂದು ಸಂಜೆ 4 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ.
ಸ್ಕೂಲ್ 10x, ಎಪಿಎನ್ ಪ್ರಾಪರ್ಟೀಸ್, SWISS, ರಾಜೇಂದ್ರ ಹಾರ್ಡ್‌ವೇರ್ ಅಂಡ್ ಪ್ಲೈವುಡ್ ಸ್ಫೋರ್ ಪ್ರಾಯೋಜಕತ್ವದಲ್ಲಿ ಈ ಪಂದ್ಯಾವಳಿ ನಡೆಯುತ್ತಿದೆ.
ಹೆಚ್ಚಿನ ಮಾಹಿತಿಗಾಗಿ 99166 73300 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಈ ವಿಭಾಗದಲ್ಲಿ ಸ್ಪರ್ಧೆಗಳು:
ಜೂನಿಯರ್ಸ್ (ಪ್ರವೇಶ ಶುಲ್ಕ 300)
11 ವರ್ಷದೊಳಗಿನವರಿಗೆ ಸಿಂಗಲ್ಸ್ (ಬಾಲಕರು ಮತ್ತು ಬಾಲಕಿಯರು)
13 ವರ್ಷದೊಳಗಿನವರಿಗೆ ಸಿಂಗಲ್ಸ್ (ಬಾಲಕರು ಮತ್ತು ಬಾಲಕಿಯರು)
15 ವರ್ಷದೊಳಗಿನವರಿಗೆ ಸಿಂಗಲ್ಸ್ (ಬಾಲಕರು ಮತ್ತು ಬಾಲಕಿಯರು)
ಸೀನಿಯರ್ಸ್ (ಪ್ರವೇಶ ಶುಲ್ಕ 600)
ಪುರುಷರ ಡಬಲ್ಸ್
ಪುರುಷರ ಡಬಲ್ಸ್ 35+
ಪುರುಷರ ಡಬಲ್ಸ್ 80+
ಮಿಶ್ರ ಡಬಲ್ಸ್
ಮಹಿಳೆಯರ ಜಂಬಲ್ಡ್ 60+
