ಮಂಗಳೂರು: ಮಾಜಿ ಶಾಸಕ ಮೊಯುದ್ದೀನ್ ಬಾವ ಅವರ ಸಹೋದರ, ಉದ್ಯಮಿ ಬಿ.ಎಂ. ಮುಮ್ತಾಝ್ ಅಲಿ ಅವರು ನಾಪತ್ತೆಯಾಗಿದ್ದು, ಲವು ಅನುಮಾನಗಳಿಗೆ ಎಡೆಮಾಡಿದೆ.
ಅವರ ಕಾರು ಮಂಗಳೂರಿನ ಕೂಳೂರು ಸೇತುವೆ ಮೇಲೆ ಅಪಘಾತಕ್ಕೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮುಂಜಾನೆ 3 ಗಂಟೆ ವೇಳೆಗೆ ಬಿ.ಎಂ. ಮುಮ್ತಾಝ್ ಅಲಿ ಮನೆಯಿಂದ ಕಾರಿನಲ್ಲಿ ತೆರಳಿ ನಗರದ ಹಲವೆಡೆ ಕಾರಿನಲ್ಲಿ ಸುತ್ತಾಡಿದ್ದಾರೆ. ನಂತರ ಕೂಳೂರು ಸೇತುವೆ ಬಳಿ ಕಾರಿಗೆ ಆಕ್ಸಿಡೆಂಟ್ ಆದ ಸ್ಥಿತಿಯಲ್ಲಿದೆ.
ಆದರೆ ಅವರು ಎಲ್ಲೂ ಕಾಣುತ್ತಿಲ್ಲ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಸೇತುವೆಗೆ ಅವರು ಹಾರಿರುವ ಶಂಕೆ ಇರುವುದರಿಂದ ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್ ಹಾಗೂ ಕೋಸ್ಟ್ ಗಾರ್ಡ್ ತಂಡದ ಸಹಾಯದೊಂದಿಗೆ ಶೋಧ ನಡೆಸುತ್ತಿದ್ದೇವೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಆಯುಕ್ತರು ಹೇಳಿದ್ದಾರೆ.