ಮೋದಿ ಅವರ ಜನ್ಮದಿನ: ಪೌರಕಾರ್ಮಿಕರಿಗೆ ಚಹಾ ವಿತರಿಸಿದ ಶ್ರೀವತ್ಸ

Spread the love

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಜನುಮದಿನದ ಪ್ರಯುಕ್ತ
ನಗರದ‌ ಚಾಮುಂಡಿಪುರಂನಲ್ಲಿ
ಅಪೂರ್ವ ಸ್ನೇಹ ಬಳಗದ ವತಿಯಿಂದ ಪೌರ ಕಾರ್ಮಿಕ ಬಂಧುಗಳಿಗೆ ಬಿಸಿ ಬಿಸಿ ಚಹಾ, ಬನ್ನು ಬಾಳೆಹಣ್ಣು ವಿತರಿಸಲಾಯಿತು.

ಚಹಾ ವಿತರಿಸಿ ಮಾತನಾಡಿದ ಶಾಸಕ ಟಿ.ಎಸ್. ಶ್ರೀವತ್ಸ ಅವರು, ದೇಶದ ಮುಂದಿನ ಭವಿಷ್ಯಕ್ಕಾಗಿ ಆರ್ಥಿಕವಾಗಿ ಭದ್ರ ಬುನಾದಿ ಮತ್ತು ದೇಶದ ಗಡಿಯನ್ನ ಬಲಿಷ್ಠಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಯವರು ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.

ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಸಂಧರ್ಭದಲ್ಲಿ ಪೌರಕಾರ್ಮಿಕರ ಪಾದಪೂಜೆ ಮಾಡುವ ಮೂಲಕ ಮೋದಿ ಅವರು ಮಾದರಿಯಾಗಿದ್ದಾರೆ, ದೇಶದಲ್ಲಿ ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ, ದೇಶದ ಪ್ರಗತಿಗಾಗಿ ಪೌರಕಾರ್ಮಿಕರ ಸ್ವಚ್ಛತಾ ಕಾರ್ಯದ ಸೇವೆ ಪ್ರಮುಖವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಜಿನಗರ ಪಾಲಿಕೆ ಮಾಜಿ ಸದಸ್ಯರಾದ ಮ ವಿ ರಾಮಪ್ರಸಾದ್, ಎಂ ಡಿ ಪಾರ್ಥಸಾರಥಿ, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ಉಪಾಧ್ಯಕ್ಷ ಜೋಗಿ ಮಂಜು, ವಿಶ್ವೇಶ್ವರಯ್ಯ,ರಘು ಅರಸ್, ನಿರೂಪಕ ಅಜಯ್ ಶಾಸ್ತ್ರಿ, ಜೀವದಾರ ರಕ್ತನಿಧಿ ಕೇಂದ್ರದ ಗಿರೀಶ್, ಪ್ರದೀಪ್, ಸಂದೀಪ್,ಕಿಶೋರ್, ದೂರ ರಾಜಣ್ಣ, ಶಿವಲಿಂಗ ಸ್ವಾಮಿ, ಆನಂದ್, ಸಚೀಂದ್ರ,
ಸ್ಥಳೀಯ ನಗರ ಪಾಲಿಕೆ ಆರೋಗ್ಯ ಅಧಿಕಾರಿಗಳು ಮತ್ತಿತರರು ಹಾಜರಿದ್ದರು.