ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಕುಂಭಮೇಳದಲ್ಲಿ ಸ್ನಾನ ಮಾಡಿದ್ದು ಚುನಾವಣಾ ಗಿಮಿಕ್ ಎಂದು ಚಾಮರಾಜ ಕ್ಷೇತ್ರ ಇಂದಿರಾ ಗಾಂಧಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರವಿ ಮಂಚೇಗೌಡನ ಕೊಪ್ಲು ಟೀಕಿಸಿದ್ದಾರೆ.
ದೇವರು- ಧರ್ಮದ ಹೆಸರಿನಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ,
ಇದಕ್ಕೆ ಮೋದಿ ಅವರು ಹೊರತಲ್ಲ ದೆಹಲಿ
ಚುನಾವಣೆ ಗಾಗಿ ಉತ್ತರಪ್ರದೇಶದ ಕುಂಭಮೇಳದಲ್ಲಿ ಮೋದಿ ಸ್ನಾನ ಮಾಡುತ್ತಿದ್ದಾರೆ ಚುನಾವಣಾ ಗಿಮಿಕ್ ಆಗಿದೆ ಎಂದು ಹೇಳಿದ್ದಾರೆ.
ದೇಶದ ಪ್ರಧಾನಿಗೆ ಕುಂಭಮೇಳಕ್ಕೆ ಹೋಗಲು ಸಮಯವಿದೆ. ಆದರೆ, ಮಣಿಪುರಕ್ಕೆ ಹೋಗಲು ಸಮಯವಿಲ್ಲ, ಮಣಿಪುರ ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಇಲ್ಲವೆ ಎಂದು ರವಿ ಅವರು ಪ್ರಶ್ನಿಸಿದ್ದಾರೆ.
ಈ ಹಿಂದೆ ರಾಜ್ಯ ವಿಧಾನಸಭಾ ಚುನಾವಣಾ ಸಮಯದಲ್ಲಿ ಮಾಂಗಲ್ಯದ ಬಗ್ಗೆ ಮಾತನಾಡಿದ್ದ ಮೋದಿ, ತಾಕತ್ತಿದ್ದರೆ ದೇವೇಗೌಡರ ಕುಟುಂಬದಿಂದ
ನೊಂದಿರುವ ಮಹಿಳೆಯರ ಪರ ಮಾತನಾಡಲಿ ಎಂದು ಸವಾಲು ಹಾಕಿದ್ದಾರೆ.
ನಿರುದ್ಯೋಗ, ಬೆಲೆ ಏರಿಕೆ, ಹಣದುಬ್ಬರ ಸಮಸ್ಯೆ, ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ, ರೈತರ ಸರಣಿ ಆತ್ಮಹತ್ಯೆಗಳ ಬಗ್ಗೆ ದಿವ್ಯ ಮೌನ ವಹಿಸಿರುವ ಪ್ರಧಾನಿ ಮೋದಿ ಅವರು ಇನ್ನಾದರೂ ಮಾತನಾಡಲಿ ಎಂದು ರವಿ ಮಂಚನಗೌಡನ ಕೊಪ್ಲು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
