ಮೈಸೂರು, ಸೆಪ್ಟೆಂಬರ್.1: ಮೋದಕ ಪ್ರಿಯ ಗಣೇಶ ಜ್ಞಾನದ ಪ್ರತೀಕ ಎಂದು ಶಾಸಕ ಜಿ.ಟಿ.ದೇವೇಗೌಡ ಬಣ್ಣಿಸಿದರು.
ಮೈಸೂರಿನ ಸರ್ದಾರ್ ವಲ್ಲಭಾ ಭಾಯ್ ಪಟೇಲ್ ನಗರದಲ್ಲಿ ಎಸ್ ವಿ ಪಿ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಗಣೇಶೋತ್ಸವದ ಸಾಂಸ್ಕೃತಿಕ ಸಂಭ್ರಮಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಮೋದಕ ಪ್ರಿಯ ಗಣೇಶ ಜ್ಞಾನದ ಪ್ರತೀಕ, ಗಣೇಶೋತ್ಸವದಲ್ಲಿ ಸಾಂಸ್ಕೃತಿಕ ಮತ್ತು ಪೌರಾಣಿಕ ಕಥೆಯನ್ನು ಕೇಳಿ ಇಂದಿನ ಯುವಕರು ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶುಭ ಕಾರ್ಯಗಳನ್ನು ಪ್ರಾರಂಭಿಸುವ ಮುನ್ನ ಗಣೇಶನಿಗೆ ಪೂಜೆ ಮಾಡುತ್ತಾರೆ ಕಾರಣ ಗಣೇಶನನ್ನು ಪ್ರಥಮ ವಂದಿತ,ವಿಘ್ನಹರ ಎಂದು ಕರೆಯುತ್ತಾರೆ ಇದರಿಂದ ಯಾವುದೇ ಕಾರ್ಯದಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳುತ್ತದೆ ಎಂಬ ನಂಬಿಕೆ ಇದೆ, ಆದ್ದರಿಂದ ಗಣೇಶನ ಪೂಜೆ ಮಾಡಿದ ನಂತರ ಇತರ ದೇವತೆಗಳ ಪೂಜೆ ಮಾಡಲಾಗುತ್ತದೆ ಎಂದು ಜಿ ಟಿ ದೇವೇಗೌಡ ತಿಳಿಸಿದರು
ಈ ಸಂದರ್ಭದಲ್ಲಿ ಸಂಘದ ವತಿಯಿಂದ ಜಿ ಟಿ ದೇವೇಗೌಡರನ್ನು ಸನ್ಮಾನಿಸಲಾಯಿತು.
ಈ ವೇಳೆ ಸಂಘದ ಅಧ್ಯಕ್ಷ ಗಗನ್, ಪ್ರಧಾನ ಕಾರ್ಯದರ್ಶಿ ಪ್ರದೀಪ್, ಸಿದ್ದರಾಜು, ಮಧುಸೂದನ್, ಹರ್ಷಗೌಡ, ಅಂತರಾಷ್ಟ್ರೀಯ ವಿಶೇಷ ಚೇತನ ಕ್ರೀಡಾಪಟು ಅಲೋಕ್ ಜೈನ್, ನಂಜುಂಡಸ್ವಾಮಿ,ಮಹಾನ್ ಶ್ರೇಯಸ್ ಮತ್ತಿತರರು ಹಾಜರಿದ್ದರು.