ಮೈಸೂರು: ಬಡವರಿಗೆ ಸಹಾಯ ಮಾಡಿದರೆ ಮಾತ್ರ ನನಗೆ ತೃಪ್ತಿ,ಅದರಲ್ಲಿ ಧನ್ಯತೆ ಇರುವುದು ಎಂದು ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ ತಿಳಿಸಿದರು.
ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ ಅವರ ಹುಟ್ಟುಹಬ್ಬದ ಪ್ರಯುಕ್ತ ಮೈಸೂರು ಯುವ ಬಳಗ ಹಾಗೂ ಅವರ ಅಭಿಮಾನಿಗಳು ದೇವರಾಜ ಅರಸು ರಸ್ತೆಯಲ್ಲಿ ಪಟಾಕಿ ಸಿಡಿಸಿ,ಕೇಕ್ ಕತ್ತರಿಸಿ ನಂತರ ಸಾರ್ವಜನಿಕರಿಗೆ ಚಿಕನ್
ಲೆಗ್ ಚಾಪ್ಸ್. ಗೀ ರೈಸ್ ಮೊಟ್ಟೆ ವಿತರಣಾ ಕಾರ್ಯ ಹಮ್ಮಿಕೊಂಡಿದ್ದ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಡಜನರಲ್ಲೇ ದೇವರನ್ನು ಕಾಣುವುದು, ಜನರ ಸಮಸ್ಯೆಗೆ ಸ್ಪಂದಿಸುತ್ತಾ ಬಂದಿದ್ದೇನೆ, ಮುಂದಕ್ಕೂ ನಾನು ನಿಮ್ಮ ಜೊತೆ ನಿರಂತರವಾಗಿ ಸಂಪರ್ಕದಲ್ಲಿ ಇರುತ್ತೇನೆ, ಪ್ರೀತಿಯಿಂದ ಅಭಿಮಾನದಿಂದ
ವಿವಿಧ ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ನನ್ನ ಜನುಮದಿನದ ಶುಭ ಕೋರಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ಎಂದು ಹರೀಶ್ ಗೌಡ ಹೇಳಿದರು.
ಮೈಸೂರು ಯುವ ಬಳಗದ ಅಧ್ಯಕ್ಷರ ನವೀನ್, ರಾಮರಾಜ್,ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಜಿ ರಾಘವೇಂದ್ರ, ಸಂದೀಪ್, ರಾಮಕೃಷ್ಣ ಗುರುರಾಜ್, ಸಂತೋಷ್, ಪ್ರಶಾಂತ್, ಪ್ರಮೋದ್ ,ನಿತಿನ್, ರವಿಚಂದ್ರ, ಎಸ್ ಎನ್ ರಾಜೇಶ್, ಕುಮಾರ್ ,ಲೋಕೇಶ್, ಹರ್ಷ ರಘು ಮುಂತಾದರು ಹಾಜರಿದ್ದರು.