ನಗರದ ಆರೋಗ್ಯ ರಕ್ಷಕರು ಪೌರಕಾರ್ಮಿಕರು – ಹರೀಶ್ ಗೌಡ

Spread the love

ಮೈಸೂರು: ನಗರದ ಆರೋಗ್ಯ ರಕ್ಷಕರು ಪೌರಕಾರ್ಮಿಕರು ಎಂದು ಶಾಸಕ ಹರೀಶ್ ಗೌಡ ಬಣ್ಣಿಸಿದರು.

ಪೌರ ಕಾರ್ಮಿಕರು ಸೂರ್ಯೋದಯ ಆಗುವಷ್ಟರಲ್ಲೇ ಕೆಲಸ ಪ್ರಾರಂಭಿಸಿ, ನಗರದ ಕಸ ತೆಹೆದು ಸ್ವಚ್ಛ ಮಾಡುತ್ತಾರೆ,ಕಸ ಎಸೆಯುವ ಮೊದಲು,ಅವರ ಶ್ರಮವನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು, ಅವರು ನಗರದ ಆರೋಗ್ಯ ರಕ್ಷಕರು ಎಂದು ತಿಳಿಸಿದರು

ನಗರದ ದೇವರಾಜ ಮೊಹಲ್ಲಾ ಬಿಡಾರ ಕೃಷ್ಣಪ್ಪ ರಸ್ತೆಯಲ್ಲಿರುವ ಉದ್ಯಾನವನದಲ್ಲಿ ದಸರಾ ಯಶಸ್ವಿಗೊಳಿಸಿದ ಹಿನ್ನೆಲೆಯಲ್ಲಿ ವಾರ್ಡ್ ನಂಬರ್ 23ರ ಸ್ವಚ್ಛತಾ ಸೇನಾನಿ ಗಳಾದ ಪೌರಕಾರ್ಮಿಕರು ಹಾಗೂ ಒಳಚರಂಡಿ ವಿಭಾಗದ ಕಾರ್ಮಿಕರು, ನೀರು ಸರಬರಾಜು ಕಾರ್ಮಿಕ ಸಿಬ್ಬಂದಿಗಳಿಗೆ
ಸಮವಸ್ತ್ರ ಹಾಗೂ ಸಿಹಿ ವಿತರಿಸಿ ಅಭಿನಂದನೆ ಸಲ್ಲಿಸಿ ಶಾಸಕರು ಮಾತನಾಡಿದರು.

ಪೌರಕಾರ್ಮಿಕರು ಪ್ರತಿ ವರ್ಷದಂತೆ ಈ ವರ್ಷವೂ ಸಹ ದಸರಾ ಸಂದರ್ಭದಲ್ಲಿ ನಗರವನ್ನು ಸ್ವಚ್ಛತೆಗೊಳಿಸುವ ಮೂಲಕ ಮೈಸೂರಿನ ಸೌಂದರ್ಯವನ್ನು ಹೆಚ್ಚಿಸಿ,
ಮೈಸೂರಿಗೆ ಹಿರಿಮೆ ತಂದಿದ್ದಾರೆ ಎಂದು ತಿಳಿಸಿದರು.

ಬೆಳಿಗ್ಗೆ ಸ್ವಚ್ಛ ಮಾಡಿದ್ದರೂ ಸಂಜೆಯಷ್ಟರಲ್ಲಿ ಮತ್ತಷ್ಟೇ ಕಸ ತುಂಬಿರುತ್ತದೆ. ಸ್ವಚ್ಛತೆಯ ಬಗ್ಗೆ ನಾಗರಿಕರಲ್ಲಿ ಇನ್ನಷ್ಟು ಅರಿವು ಬೆಳೆಯಬೇಕು. ನಗರ ಸ್ವಚ್ಛವಾಗುವುದರ ಜೊತೆಗೇ ನಮ್ಮ ವಿಚಾರಗಳಲ್ಲೂ ಬದಲಾವಣೆ ತಂದುಕೊಳ್ಳಬೇಕು. ಸ್ವಚ್ಛತೆ ಕಾಪಾಡುವಲ್ಲಿ ನಾವೇನು ಮಾಡಿದ್ದೇವೆ ಎಂದು ಪರಾಮರ್ಶೆ ಮಾಡಿಕೊಳ್ಳಬೇಕು ಎಂದು ಹರೀಶ್ ಗೌಡ ಹೇಳಿದರು.

ಕನ್ನಡ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್, ಕಾಂಗ್ರೆಸ್ ಮುಖಂಡರುಗಳಾದ ರಾಜೀವ್ , ಮಂಜುನಾಥ್,ನವೀನ್, ಆನಂದ್,ಜ್ಞಾನೇಶ್ ರವಿಚಂದ್ರ, ಗುರುರಾಜ್,
ನಿತಿನ್,ಮಂಜುಳಾ, ಶಾಂತ ಮಂಗಳ ,ಲೀಲಾ, ಪವನ್, ನಂಜುಂಡಿ, ಹರೀಶ್ ಗೌಡ, ಈರೇಗೌಡ, ಪ್ರಜ್ವಲ್, ಹರ್ಷ, ಎಸ್ ಎನ್ ರಾಜೇಶ್, ಉಪಸ್ಥಿತರಿದ್ದರು.