ಮೈಸೂರು: ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ನಿಧನದಿಂದ, ಭಾರತ ಶ್ರೇಷ್ಠ ರತ್ನವೊಂದನ್ನು ಕಳೆದುಕೊಂಡಂತಾಗಿದೆ ಎಂದು ಶಾಸಕ ಕೆ ಹರೀಶ್ ಗೌಡ ದುಃಖ ವ್ಯಕ್ತಪಡಿಸಿದರು.

ನಗರದ ದೇವರಾಜ ಅರಸು ರಸ್ತೆಯಲ್ಲಿ ಮೈಸೂರು ಯುವ ಬಳಗದ ವತಿಯಿಂದ ಆಯೋಜಿಸಿದ್ದ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಸಂತಾಪ ಸಭೆಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಹರೀಶ್ ಗೌಡ ಮಾತನಾಡಿದರು.
ಜಗತ್ತಿನ ಆರ್ಥಿಕ ನಾಯಕರಾಗಿ, ಹಲವಾರು ರಾಷ್ಟ್ರಗಳ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಮಾರ್ಗದರ್ಶನ ನೀಡಿದ್ದರು. ಮಾನವೀಯ ಮೌಲ್ಯಗಳಿಗೆ ಹೆಚ್ಚು ಗೌರವ ನೀಡಿದ್ದ ನಾಯಕ ಇಂದು ನಮ್ಮನ್ನು ಬಿಟ್ಟು ಅಗಲಿದ್ದಾರೆ ಎಂದು ತೀವ್ರ ಸಂತಾಪ ವ್ಯಕ್ತಪಡಿಸಿದರು.
ಮಾಜಿ ಉಪ ಮಹಾಪೌರರಾದ ಪುಷ್ಪವಲ್ಲಿ , ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ವಾರ್ಡ್ ನಂಬರ 41ರ ಅಧ್ಯಕ್ಷ ನಂಜುಂಡಸ್ವಾಮಿ, ವಾರ್ಡ್ ನಂಬರ್23ರ ಕಾಂಗ್ರೆಸ್ ಮುಖಂಡ ರವಿಚಂದ್ರ, ಈರೇಗೌಡ, ರವಿ,ಮಂಜುನಾಥ್ ಗೌಡ, ನಿತಿನ,ಸಂತೋಷ, ನವೀನ,ಶ್ರೀನಿವಾಸ್ ಆಚಾರ್, ವಿನೋದ್, ಪ್ರಜ್ವಲ್, ರಾಜೇಶ, ಭಗವಾನ್, ಅಜಿತ್,
ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆಲನಹಳ್ಳಿ ಎಂ ಎನ್ ಚೇತನ್ ಗೌಡ,
ಮಹಾನ್ ಶ್ರೇಯಸ್ ಮತ್ತಿತರರು ಪಾಲ್ಗೊಂಡಿದ್ದರು.