ಮೈಸೂರು: ನಮ್ಮ ಟಿ.ವಿ ಮೈಸೂರು ವತಿಯಿಂದ ಆಯೋಜಿಸಿದ್ದ ದ್ವಿತೀಯ ವರ್ಷದ ಎo ಎಲ್ ಎ ಕ್ರಿಕೆಟ್ ಕಪ್ ಪಂದ್ಯಾವಳಿಯಲ್ಲಿ ಕೆ.ಆರ್. ಕ್ಷೇತ್ರದ ಶಾಸಕರಾದ ಟಿ. ಎಸ್. ಶ್ರೀವತ್ಸ ಅವರ ನೇತೃತ್ವದ ತಂಡ ಕಪ್ ಗೆದ್ದುಕೊಂಡಿತು.
ಲೀಗ್ ಹಂತದಲ್ಲೇ ಎರಡು ಪಂದ್ಯಗಳಲ್ಲಿ ಗೆದ್ದ ನಂತರ ಸೆಮಿ ಫೈನಲ್ ಪಂದ್ಯದಲ್ಲಿ ಎಚ್. ಡಿ. ಕೋಟೆ ತಂಡದ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆ ಆರ್ ಕ್ಷೇತ್ರದ ತಂಡವು 6 ಓವರ್ ಗಳಲ್ಲಿ 67 ಗಳಿಸಿತು.
ಇದನ್ನು ಬೆನ್ನಟ್ಟಿದ ಹೆಚ್.ಡಿ. ಕೋಟೆ ತಂಡವು ಆರು ಓವರ್ ಗಳಲ್ಲಿ 65 ಗಳಿಸಿ ಸೋಲು ಅನುಭವಿಸಿತು.
ನಂತರ ಫೈನಲ್ ಪ್ರವೇಶಿಸಿದ ಕೆ.ಆರ್. ಕ್ಷೇತ್ರದ ತಂಡವು ನಂಜನಗೂಡಿನ ತಂಡದ ಮೇಲೆ ಮೊದಲು ಬ್ಯಾಟಿಂಗ್ ಮಾಡಿ ಆರು ಓವರ್ ಗಳಲ್ಲಿ 80 ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ನಂಜನಗೂಡು ತಂಡವು ಆರು ಓವರ್ ಗಳಲ್ಲಿ 58 ರನ್ ಗಳಿಸಿತು ಇದರೊಂದಿಗೆ ಕೆ.ಆರ್ ಕ್ಷೇತ್ರದ ತಂಡವು ಭರ್ಜರಿ ಜಯವನ್ನು ಸಾಧಿಸಿ ಈ ಬಾರಿಯ ಎo ಎಲ್ ಎ ಕಪ್ಪ್ ಜೊತೆಗೆ ಒಂದು ಲಕ್ಷದ ಮೊತ್ತದ ಬಹುಮಾನವನ್ನು ತಮ್ಮದಾಗಿಸಿಕೊಂಡಿತು.
ಶಾಸಕರಾದ ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ್ ಅವರುಗಳು ಕೆಆರ್ ಕ್ಷೇತ್ರದ ಶಾಸಕರಾದ ಟಿ ಎಸ್ ಶ್ರೀವತ್ಸ ಅವರಿಗೆ ಟ್ರೋಫಿಯನ್ನು ನೀಡಿದರು.
ತಂಡದ ಆಟಗಾರರ ಪಟ್ಟಿ ಶಾಸಕರಾದ ಟಿ. ಎಸ್. ಶ್ರೀವತ್ಸ ( ನಾಯಕರು)
ಹೇಮಂತ್, ಕೀರ್ತಿ, ವಿನಯ, ಪೃಥ್ವಿ, ಚಂದು, ಮಧುಚಂದ್ರ,ಹರೀಶ್ ಪ್ರೀತಂ ಶಾಂತಿ ಅಶೋಕ್ ಗೌರವ್
ಶರಣ್ ಹಾಗೂ ಪಂದ್ಯಾವಳಿಯ ಆಯೋಜಕರು ಕೆ ಆರ್ ಕ್ಷೇತ್ರದ ಅಧ್ಯಕ್ಷರಾದ ಗೋಪಾಲ್ ರಾಜೇ ಅರಸ್.ಜಯರಾಮ್.ಪ್ರದೀಪ್ ಕುಮಾರ್.ಕೆ ಜೆ ರಮೇಶ್ ರಾಕೇಶ್ ಗೌಡ,ಜೊಗಿ ಮಂಜು, ಚೇತನ್, ಖಂಡೇಶ್, ಮಧುಸೂದನ್, ಮಾಯಾ ಜಗದೀಶ್, ರಾಜೇಶ್, ಕಿಶೋರ್, ಗಿರೀಶ್ ಗೌಡ, ನಿಶಾಂತ್, ಬಿಜೆಪಿ ಮುಖಂಡರು ಹಾಜರಿದ್ದರು.
