ಮೈಸೂರು: ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡಿ ಇತರರಿಗೆ ಮಾದತಿಯಾಗಿದ್ದಾರೆ.
ಮೈಸೂರಿನ ನಾಯ್ಡು ನಗರದಲ್ಲಿರುವ ಮಹಾರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ನಾರಾಯಣ ಹೃದಯಾಲಯ, ಮಹಾರಾಜ ಆಯುರ್ವೇದ ಆಸ್ಪತ್ರೆ ಹಾಗೂ ಜೀವದಾರ ರಕ್ತ ನಿಧಿ ಕೇಂದ್ರದ ಸಹಾಯಕದೊಂದಿಗೆ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡುವ ಮೂಲಕ ಅರ್ಥಪೂರ್ಣವಾಗಿ ರಕ್ತದಾನ ದಿನವನ್ನು ಆಚರಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ನಾರಾಯಣ ಹೃದಯಾಲಯದ ವೈದ್ಯರಾದ ಡಾಕ್ಟರ್ ಎಂ ಎನ್ ರವಿ, ರಕ್ತದಾನದ ಮಹತ್ವ ಹಾಗೂ ಅದರಿಂದ ರಕ್ತ ದಾನಿಗಳಿಗೆ ಆಗುವಂತಹ ಪ್ರಯೋಜನಗಳ ಬಗ್ಗೆ ವಿವರವಾಗಿ ತಿಳಿಸಿದರು.
ಡಾಕ್ಟರ್ ತಸಿಫ್ ಅಹಮದ್ ಗಣ್ಯರನ್ನು ಸ್ವಾಗತಿಸಿದರು.
ಎಂ ಐ ಟಿ ಕಾಲೇಜಿನ ಅಧ್ಯಕ್ಷ ಡಾಕ್ಟರ್ ಮುರಳಿ ಮಾತನಾಡಿ,ಕಾಲೇಜಿನಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿದ್ದಕ್ಕಾಗಿ ಹರ್ಷ ವ್ಯಕ್ತಪಡಿಸಿದರು ಹಾಗೂ ರಕ್ತದಾನಿಗಳನ್ನು ಪ್ರಶಂಸಿಸಿದರು,
ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲು ಮಹಾರಾಜ ಎಜುಕೇಶನ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಾಕ್ಟರ್ ಎಸ್ ಮುರಳಿ ಅವರು ಸ್ವತಹ ರಕ್ತದಾನ ನೀಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.

ಮಹಾರಾಜ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾಕ್ಟರ್ ಕೃಷ್ಣಮೂರ್ತಿ, ಡಾಕ್ಟರ್ ನರೇಶ್ ಕುಮಾರ್,ಡಾಕ್ಟರ್ ಯಶ್ವಂತ್ ರಾಜು, ಡಾಕ್ಟರ್ ವಿಜಯಲಕ್ಷ್ಮಿ, ಡಾಕ್ಟರ್ ವೈ ಟಿ ಕೃಷ್ಣೇಗೌಡ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಡಾಕ್ಟರ್ ಜಯರಾಜ್, ಡಾಕ್ಟರ್ ಎನ್ ವಿ ಕೃಷ್ಣಮೂರ್ತಿ ಹಾಗೂ ಕಾಲೇಜಿನ ಸಿಬ್ಬಂದಿ ಹಾಜರಿದ್ದರು.