ಮೈಸೂರು: ಮಧ್ಯರಾತ್ರಿ ಸಮಯದಲ್ಲಿ ರಸ್ತೆಯಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದ ಯುವಕರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಹೀಗೆ ಕಿರಿಕಿರಿ ವುಂಟು ಮಾಡಿದ್ದ ಮೂರ್ನಾಲ್ಕು ಹುಡುಗರನ್ನು ಕೆ.ಆರ್.ಠಾಣೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.ಜತೆಗೆ ಮತ್ತೆ ಇಂತಹ ಕೆಲಸ ಮಾಡದಂತೆ ತಾಕೀತು ಮಾಡಿದ್ದಾರೆ.
ಈ ಯುವಕರು ಮೈಸೂರಿನ ಬಸವೇಶ್ವರ ರಸ್ತೆ 10ನೇ ಕ್ರಾಸ್ ನಲ್ಲಿ ಮಧ್ಯರಾತ್ರಿ ನಡುರಸ್ತೆಯಲ್ಲೇ
ಕೇಕ್ ಕಟ್ ಮಾಡಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು.