ಮೈಸೂರು: ಕುವೆಂಪುನಗರ, ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಮೆತ್ತಾಲೋಕ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ನೋಟ್ ಬುಕ್, ಹಣ್ಣು ಹಂಪಲು ವಿತರಿಸುವ ಮೂಲಕ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ಈ ವೇಳೆ ಶೋಭನ ಬಂತೆ ಜಿ ಅವರು ಎಲ್ಲರಿಗೂ ಬುದ್ಧ ಭಗವಾನರ ದಮ್ಮ ಪ್ರವಚನ ನೀಡಿ ಎಲ್ಲರೂ ಪಂಚಶೀಲ ಪರಿಪಾಲನೆ ಮಾಡುವಂತೆ ತಿಳಿಸಿದರು.

ಹೆಚ್ಚು ಹೆಚ್ಚು ದಾನ ನೀಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಿ, ದಾನದಿಂದ ಕುಶಲ ಕಮ್ಮ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯ ಶುಭ ಕೋರಿದರು.

ವಿಶುದ್ಧ ಶೀಲ ಬಂತೆ ಜಿ,ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಚಿಕ್ಕ ಗರಡಿ ಅಧ್ಯಕ್ಷ ಬಿ. ನಾಗರಾಜು ( ಬಿಲ್ಲಯ್ಯ ),ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಹಿರಿಯ ಕ್ರೀಡಾಪಟು ಮಹದೇವ್, ಜೆ.ಡಿ.ಎಸ್. ಮುಖಂಡ ವೆಂಕಟೇಶ್, ಸ್ವಾಮಿ.ದನಗಳ್ಳಿ,ಸುಬ್ರಮಣಿ ,
ರಾಜೇಶ್ ಕುಮಾರ್, ಮಹೇಶ್, ವೀರಭದ್ರ ಸ್ವಾಮಿ, ಶ್ರೀಧರ್,ಎಸ್.ಪಿ.ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್, ದತ್ತ ಮತ್ತಿತರರು ಹಾಜರಿದ್ದರು.