ಚೋಳರ ಕಾಲದ ದೇವಾಲಯದ ಬೀಗ ಮುರಿದು ಕಳವು

Spread the love

ಮೈಸೂರು: ಪುರಾತನ ಚೋಳರ ಕಾಲದ ದೇವಾಲಯದ ಬೀಗ ಮುರಿದ ಕಳ್ಳರು ಬೆಲೆಬಾಳುವ ವಸ್ತುಗಳನ್ನು ದೋಚಿರುವ ಘಟನೆ ಮೈಸೂರಿನ ಮೇಟಗಳ್ಳಿ ಗ್ರಾಮದಲ್ಲಿ ನಡೆದಿದೆ.

ಮೇಟಗಳ್ಳಿ ಗ್ರಾಮದ ಮಹಾಲಿಂಗೇಶ್ವರ ದೇವಾಲಯದಲ್ಲಿ ಕಳ್ಳತನ ನಡೆದಿದ್ದು, ಪಂಚಲೋಹದ ಕೊಳಗ,
ತೂಗುದೀಪ,ಹಿತ್ತಾಳೆ ಚೊಂಬು,
ಮಂಗಳಾರತಿ ತಟ್ಟೆ,ತಾಮ್ರದ ಗಂಟೆ ದೋಚಿ ಪರಾರಿಯಾಗಿದ್ದಾರೆ.

ಚೋಳರ ಕಾಲದ ಪುರಾತನ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದೆ.ಸೋಮವಾರ ಬೆಳಿಗ್ಗೆ ಅರ್ಚಕರಾದ ಮೋಹನ್ ಪ್ರಸಾದ್ ದೇವಾಲಯಕ್ಕೆ ಬಂದ ವೇಳೆ ಕೃತ್ಯ ಬೆಳಕಿಗೆ ಬಂದಿದೆ.

ದೇವಾಲಯದ ಸಮೀಪ ಅಭಿವೃದ್ದಿ ಕಾಣದ ಹಿನ್ನಲೆ ಗಾಂಜಾ ವ್ಯಸನಿಗಳು ಈ ಸ್ಥಳವನ್ನ ಅಡ್ಡೆ ಮಾಡಿಕೊಂಡಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.

ಗಾಂಜಾ ವ್ಯಸನಿಗಳೇ ಈ ಕೃತ್ಯ ಎಸಗಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಮೇಟಗಳ್ಳಿ ಪೊಲೀಸರು ಭೇಟಿ ನೀಡಿ ಪರಿಶಿಲಿಸಿದರು.

ತಹಸೀಲ್ದಾರ್ ಮಹೇಶ್ ಕುಮಾರ್ ಸೂಚನೆ ಮೇರೆಗೆ ಸ್ಥಳಕ್ಕೆ ಆರ್.ಐ.ಹೇಮಂತ್ ಕುಮಾರ್ ಹಾಗೂ ಗ್ರಾಮ ಆಡಳಿತಾಧಿಕಾರಿ ಮಹೇಶ್ ಭೇಟಿ ನೀಡಿ ಅರ್ಚಕ ಮಹದೇವ್ ಪ್ರಸಾದ್ ರಿಂದ ಮಾಹಿತಿ ಪಡೆದು ಮೇಟಗಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ.