ಕೋಲ್ಕತಾ: ಖ್ಯಾತ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ 3 ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದ್ದು,ಕೋಲ್ಕತ್ತಾ ಕ್ರೀಡಾಂಗಣದಲ್ಲಿ ಅಭಿಮಾನಿಗಳು ದಾಂಧಲೆ ನಡೆಸಿದರು.
ಮೆಸ್ಸಿ ಬೆಳಿಗ್ಗೆ ಕೋಲ್ಕತ್ತಾಗೆ ಆಗಮಿಸಿ ಸಾಲ್ಟ್ ಲೇಕ್ ಕ್ರೀಡಾಂಗಣಕ್ಕೆ ಭೇಟಿ ನೀಡಿದರು. ಆದರೆ ಮೆಸ್ಸಿ ಕೇವಲ 10 ನಿಮಿಷ ಕ್ರೀಡಾಂಗಣದಲಿದ್ದು, ಅಲ್ಲಿಂದ ಹೊರಟುಬಿಟ್ಟರು.
ಮೆಸ್ಸಿ ನೋಡಲೆಂದೆ ಅಭಿಮಾನುಗಳು 5000 ದಿಂದ 50000 ಸಾವಿರದವರೆಗೆ ಟಿಕೆಟ್ ಕೊಟ್ಟು ಸ್ಟೇಡಿಯಂಗೆ ಬಂದಿದ್ದರು.ಆದರೆ ಮೆಸ್ಸಿಯನ್ನ ನೋಡಲಾಗದೇ ಹತಾಶೆಯಿಂದ ಸ್ಟೇಡಿಯಂನ ವಿಐಪಿ ಗೇಟ್ನಿಂದ ಮೈದಾನಕ್ಕೆ ನುಗ್ಗಲು ಯತ್ನಿಸಿದರು.
ಈ ವೇಳೆ ಅಭಿಮಾನಿಗಳು ತೀವ್ರ ಆಕ್ರೋಶಗೊಂಡು ಆಸನಗಳನ್ನ ಮೈದಾನಕ್ಕೆ ಎಸೆದಿದ್ದಾರೆ. ಅಭಿಮಾನಿಗಳನ್ನ ಕಂಟ್ರೋಲ್ ಮಾಡಲು ಪೊಲೀಸರು ಹರಸಾಹಸ ಪಟ್ಟರು. ಅಭಿಮಾನಿಗಳು ಕೈಗೆ ಸಿಕ್ಕಿದ್ದನ ಭದ್ರತಾಪಡೆಗಳ ಮೇಲೂ ಎಸೆದಿದ್ದರೆ,ಒಂದು ಹಂತದಲ್ಲಿ ಅಭಿಮಾನಿಗಳ ದಾಂಧಲೆಯಿಂದ ತಪ್ಪಿಸಿಕೊಳ್ಳಲು ಪೊಲೀಸರು ಮೈದಾನಕ್ಕೆ ಓಡಿದರು.ಈ ಸಂದರ್ಭದಲ್ಲಿ
ಕೆಲ ಸಿಬ್ಬಂದಿ ಗಾಯಗೊಂಡಿದ್ದಾರೆ.
ಫುಟ್‌ಬಾಲ್ ಆಟಗಾರ ಮೆಸ್ಸಿ ನೋಡಲಾಗದೆ ಅಭಿಮಾನಿಗಳ ದಾಂಧಲೆ!