ಮೈಸೂರು: ನಗರದ ಶ್ರೀರಾಂಪುರ 2ನೇ ಹಂತದಲ್ಲಿನ ಮರ್ಸಿ ಕಾನ್ವೆಂಟ್ ನಲ್ಲಿ ಶ್ರವಣದೋಷವುಳ್ಳ ವಿದ್ಯಾರ್ಥಿಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ಲೇಖನಿ, ಹಣ್ಣು ಹಂಪಲು ವಿತರಿಸುವ ಮೂಲಕ ಮಾತೆ ಮೇರಿ ಜನ್ಮದಿನವನ್ನು ಸ್ಮರಿಸಲಾಯಿತು.
ಸಂತ ಮೇರಿ ಪ್ರಭು ಏಸುಕ್ರಿಸ್ತನ ತಾಯಿ. ತಾಯಿಯಾಗಲು ದೇವರಿಂದ ಕರೆ ಹೊಂದಿದ ಮಾತೆ ಮೇರಿ ಮನುಕುಲದ ತಾಯಿಯಾ ಗಿರುವುದರಿಂದ ಇವರ ಜನ್ಮದಿನವನ್ನು ಸ್ಮರಿಸಿ ಒಳ್ಳೆಯ ಕಾರ್ಯ ಮಾಡಲಾಗುತ್ತಿದೆ ಎಂದು
ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್ ಈ ವೇಳೆ ತಿಳಿಸಿದರು.
ಈ ಸಂದರ್ಭದಲ್ಲಿ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಪತ್ರಿಕಾ ವಿತರ ಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್,ಗಾಯಕ ಯಶವಂತ್ ಕುಮಾರ್, ಹಿರಿಯ ಕ್ರೀಡಾಪಟು ಮಹದೇವ್, ಜ್ಯೋತಿ ಸಾನ್ವಿಕ,ಮಹೇಶ್, ರಾಜೇಶ್ ಕುಮಾರ್, ಎಲ್.ಐ.ಸಿ. ವೆಂಕಟೇಶ್, ಎಸ್ ಪಿ ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್,ದತ್ತ, ಸಿದ್ದಾರ್ಥ್ ಮತ್ತಿತರರು ಹಾಜರಿದ್ದರು.
