ಮಾನಸಿಕ ಸಮಸ್ಯೆ ಮುಕ್ತಿಗೆ ಸಂಗೀತ ಒಳಿತು: ಡಾ .ರೇಖಾ ಅರುಣ್

ಮೈಸೂರು: ಮಾನಸಿಕ ಸಮಸ್ಯೆಗಳಿಂದ
ಮುಕ್ತವಾಗಬೇಕಿದ್ದರೆ ಸಾಹಿತ್ಯ ಸಂಗೀತದ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು ಡಾ. ರೇಖಾ ಅರುಣ್ ಸಲಹೆ ನೀಡಿದರು.

ಮೈಸೂರು ಪುರಭವನ ದಲ್ಲಿ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ರವರ 74 ನೇ ವರ್ಷದ ಜನ್ಮದಿನದ ಅಂಗವಾಗಿ ಶ್ರೀ ಗಣೇಶ ಮ್ಯೂಸಿಕಲ್ ಗ್ರೂಪ್ಸ್ ಎ ಕಾಂತರಾಜು ಅವರ ಸಾರಥ್ಯದಲ್ಲಿ ಹಮ್ಮಿಕೊಂಡಿದ್ದ ಡಾಕ್ಟರ್ ವಿಷ್ಣುವರ್ಧನ್ ಅಭಿನಯದ ಗೀತೆಗಳ ಕರೋಕೆ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಭಿಮಾನಿಗಳ ಅಚ್ಚುಮೆಚ್ಚಿನ ನಟ ಡಾ.ವಿಷ್ಣುವರ್ಧನ್,ಸದಾಕಾಲ ಸ್ಥಿತ ಪ್ರಜ್ಞೆ ಹೊಂದಿದ್ದ ಅವರು, ಸಮಾಜವನ್ನು ಆರೋಗ್ಯಕರ ಚಿಂತನೆಗೆ ಹಚ್ಚುವಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಬಗೆಗೆ ವಿಶೇಷ ಪ್ರೀತಿ ಹೊಂದಿದ್ದರು. ಕಳಂಕರಹಿತರಾಗಿ ಬಾಳಿದ ವಿಷ್ಣು ಅವರು ಯುವ ಸಮುದಾಯದ ಬಗ್ಗೆ ಹೆಚ್ಚು ಒಲವು ಬೆಳೆಸಿಕೊಂಡಿದ್ದರು ಎಂದು ತಿಳಿಸಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಮೇಲುಕೋಟೆ ವಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ ಅವರು,
ಕನ್ನಡ ನಾಡು–ನುಡಿ ಬಗೆಗೆ ಅಪಾರ ಕಳಕಳಿ ಹೊಂದಿದ್ದ ಡಾ. ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಕಲಾವಿದ ಎಂದು ಶ್ಲಾಘಿಸಿದರು.

ಯುವಜನರಲ್ಲಿ ಭಾಷಾಭಿಮಾನ ಮತ್ತು ದೇಶಾಭಿಮಾನ ಮೂಡಿಸುವಂತಹ ಸದಭಿರುಚಿ ಚಿತ್ರಗಳಲ್ಲಿ ನಟಿಸಿ ಜನಮನ್ನಣೆ ಗಳಿಸಿದ್ದ ಅವರ ಜೀವನ ಕಿರಿಯ ನಟರಿಗೆ ಮಾದರಿ ಎಂದು ಹೇಳಿದರು.

ಇದೇ ವೇಳೆ ಇಳೈ ಆಳ್ವಾರ್ ಸ್ವಾಮೀಜಿ,
ಡಾ. ರೇಖಾ ಅರುಣ್, ಹೃದಯ ತಜ್ಞ ಡಾ. ಮಂಜುನಾಥ್,ಮನೋಶಾಸ್ತ್ರಜ್ಞೆ ಡಾ|| ರೇಖಾ ಮನಃಶಾಂತಿ, ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ,ಶ್ರೀ ಗಣೇಶ ಮ್ಯೂಸಿಕಲ್ ಗ್ರೂಪ್ಸ್ ಸಂಸ್ಥಾಪಕರಾದ ಎ.ಕಾಂತರಾಜು,
ಗಾಯಕರಾದ ಬಿ ನವೀನ್ ಕುಮಾರ್,
ಜಯಲಕ್ಷ್ಮಿ ನಾಯ್ಡು, ಲಕ್ಷ್ಮಿ, ಗುರುರಾಜ್, ಮತ್ತಿತರರು ಹಾಜರಿದ್ದರು.