ಮೈಸೂರು: ಯೋಗದೊಂದಿಗೆ ಧ್ಯಾನವನ್ನು ಅಳವಡಿಸಿಕೊಂಡರೆ ಮನಶ್ಯಾಂತಿ ದೊರೆಯಲಿದೆ ಎಂದು ಶ್ರೀ ಪತಂಜಲಿ ಯೋಗಾ ಶಿಕ್ಷಣ ಸಮಿತಿ ಮೈಸೂರು ಜೆ ಸಿ ಉಪನಗರದ ಯೋಗ ಸಂಚಾಲಕ ಗಿರೀಶ್ ತಿಳಿಸಿದರು.
ಸಂಸ್ಕಾರ ಸಂಘಟನೆ ಸೇವೆ ಶ್ರೀ ಪತಂಜಲಿ ಯೋಗಾ ಶಿಕ್ಷಣ ಸಮಿತಿ ಮೈಸೂರು ವತಿಯಿಂದ ಸರಸ್ವತಿಪುರಂನಲ್ಲಿರುವ ಜೆಎಸ್ಎಸ್ ಮಹಿಳಾ ವಸತಿ ನಿಲಯದಲ್ಲಿ ವಿಶ್ವ ಯೋಗ ದಿನಾಚರಣೆ ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಧ್ಯಾನದ ಮಹತ್ವ ತಿಳಿಸಿ ಅವರು ಮಾತನಾಡಿದರು.
ಯೋಗ ಅಭ್ಯಾಸದಲ್ಲಿ ಧ್ಯಾನ ಎಂಬುದು ಏಳನೆಯ ಹಂತವಾಗಿದ್ದು ಇದನ್ನ ನಾವು ಜೀವನದಲ್ಲಿ ಅಳವಡಿಸಿಕೊಂಡರೆ ನಾವೆಲ್ಲರೂ ಸದೃಢರಾಗುವುದರ ಜೊತೆಗೆ ಆರೋಗ್ಯವಂತರಾಗಿರಬಹುದು ಎಂದು ಗಿರೀಶಣ್ಣ ತಿಳಿಸಿದರು.
ಕಾರ್ಯಕ್ರಮದ ಮೊದಲಿಗೆ ಶ್ರೀ ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನು ಇಟ್ಟು ದೀಪ ಬೆಳಗಿಸುವುದರ ಮೂಲಕ ವಿಶ್ವಧ್ಯಾನ ದಿನಾಚರಣೆಯನ್ನು ಪ್ರಾರಂಭಿಸಲಾಯಿತು.
ಒಟ್ಟಾರೆ ಮಕ್ಕಳೆಲ್ಲರೂ ಸೇರಿ ವಿಶ್ವಧ್ಯಾನ ದಿನಾಚರಣೆಯನ್ನು ಖುಷಿಯಿಂದ ಆಚರಿಸಿದರು.