ಮೈಸೂರು: ನಗರದ ಲಲಿತಾದ್ರಿಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಮೈಸೂರು ವಿಭಾಗದ ವತಿಯಿಂದ ವಿಶ್ವ ಧ್ಯಾನ ದಿನ ಆಚರಿಸಲಾಯಿತು.
ಗುರುದೇವ ಶ್ರೀ ರವಿಶಂಕರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ಧ್ಯಾನ ಅಧಿವೇಶನವನ್ನು
ಆರ್ಟ್ ಆಫ್ ಲಿವಿಂಗ್ ಮೈಸೂರು ವಿಭಾಗದ ಕಾರ್ಯನಿರ್ವಾಹಕರಾದ
ಶ್ರೀ ದಿವ್ಯಪಾದ ಸ್ವಾಮೀಜಿ ಜನರಿಗೆ ಧ್ಯಾನದಿಂದ ಆಗುವ ಉಪಯೋಗಗಳ ಬಗ್ಗೆ ತಿಳಿಸಿಕೊಟ್ಟರು.
ಈ ವೇಳೆ ಮಾತನಾಡಿದ ಅವರು
ಯೋಗ ನಮ್ಮ ಋಷಿಮುನಿಗಳ ಕೊಡುಗೆ. ಅಂದಿನಿಂದ ಇಂದಿನವರೆಗೂ ಅದನ್ನು ಉಳಿಸಿಕೊಂಡು ಬರಲಾಗಿದೆ,ಇದು ದ್ಯಾನಕ್ಕಿರುವ ಮಹತ್ವವನ್ನು ತೋರಿಸುತ್ತದೆ. ಮನಸ್ಸು ಮತ್ತು ದೇಹದ ಸಮತೋಲನ ಕಾಯ್ದು ಕೊಳ್ಳುವುದಕ್ಕೆ ಯೋಗ ಹಾಗೂ ಧ್ಯಾನ ಅತ್ಯವಶ್ಯಕ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಾಮುಂಡಿ ಬೆಟ್ಟದ ಸಿಇಒ ರೂಪ, ನಿವೃತ್ತ ಎಸ್ ಪಿ ಶಂಕರೇಗೌಡ, ಉದ್ಯಮಿ ಚರಣ್ ರಾಜ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,ಬಿ ಆರ್ ಪೈ, ಕೊಡವ ಸಮಾಜದ ಅಧ್ಯಕ್ಷರಾದ
ಶೆರ್ರಿ ಬೆಳ್ಳಿಯಪ್ಪ, ಡಾ.ಸುಷ್ಮಾ ಕೃಷ್ಣಮೂರ್ತಿ, ಕಾವೇರಿ ಇನ್ಸ್ಟಿಟ್ಯೂಷನ್ ಮುಖ್ಯಸ್ಥರಾದ ನವೀನ್, ಅಪೂರ್ವ ಸುರೇಶ್, ವಿಶ್ವನಾಥ್, ಶಾಂತಿ ಸಾಗರ್ ಸುರೇಶ್ ಮತ್ತಿತರರು ಭಾಗವಹಿಸಿದ್ದರು.