ಮೈಸೂರು: ಮೈಸೂರಿನ ಕೆಆರ್ ಪೊಲೀಸ್ ಸ್ಟೇಷನ್ ಪಕ್ಕ ಅಗ್ರಹಾರದ ಡಾ. ಅಣ್ಣಾಜಪ್ಪನವರ ನವಗ್ರಹ,
ಮೃತ್ಯುಂಜಯೇಶ್ವರ,ಪಾರ್ವತಿದೇವಿ ಮತ್ತು
ಶ್ರೀ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ಮೇ 27ರಂದು ಶ್ರೀ ಶನೇಶ್ವರ ಸ್ವಾಮಿ ಜಯಂತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
27ರಂದು ಮಂಗಳವಾರ ಬಾದಾಮಿ ಅಮಾವಾಸ್ಯೆ ಕೂಡ ಇದ್ದು ಅಂದು ಮುಂಜಾನೆ 6.30ಕ್ಕೆ ಶ್ರೀ ಸ್ವಾಮಿಗೆ ತೈಲಾಭಿಷೇಕ ನಂತರ 9 ಗಂಟೆಗೆ ರುದ್ರಾಭಿಷೇಕ, ಗಣಪತಿ ಹೋಮ, ನವಗ್ರಹ ಶಾಂತಿ ಹೋಮ ಶನೇಶ್ಚರ ತಿಲ ಹೋಮ ಮತ್ತು ಮೃತ್ಯುಂಜಯ ಹೋಮವನ್ನು ಏರ್ಪಡಿಸಲಾಗಿದೆ.

ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ ನೆರವೇರಲಿದೆ, ಮಹಾಮಂಗಳಾರತಿ ನಂತರ ಅನ್ನದಾಸೋಹ ಏರ್ಪಡಿಸಲಾಗಿದೆ.
ಸಂಜೆ 7 ಕ್ಕೆ ಭಕ್ತಿಗೀತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಿವಾರ್ಚಕರಾದ ಎಸ್. ಯೋಗಾನಂದ ಅವರು ತಿಳಿಸಿದ್ದಾರೆ.