ಮಠಗಳ ಆಶ್ರಯದಲ್ಲಿ ಜಾನಪದ ಬೆಳೆಯುತ್ತಿದೆ: ಡಾ.ಜಾನಪದ ಬಾಲಾಜಿ

Spread the love

ಸೊರಬ: ಹಿಂದಿನ ಕಾಲದಲ್ಲಿ ರಾಜಶ್ರಯ ಇರುತ್ತಿತ್ತು, ಇತ್ತೀಚಿಗೆ ಮಠಗಳ ಆಶ್ರಯದಲ್ಲಿ ಜಾನಪದ ಬೆಳೆಯುತ್ತಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿ ಆರ್ ಸದಸ್ಯ ಡಾ ಜಾನಪದ ಬಾಲಾಜಿ ತಿಳಿಸಿದರು.

ಸೊರಬ ತಾಲೂಕಿನ ಜಡೆ ಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದು ಅವರು ಮಾತನಾಡಿದರು.

ಜಡೆ ಮಠದಲ್ಲಿ ಮುಂದಿನ ದಿನಗಳಲ್ಲಿ ಕನ್ನಡ ಜಾನಪದ ಪರಿಷತ್ ವತಿಯಿಂದ ತಾಲೂಕಿನ ಜನಪದ ಕಲಾವಿದರನ್ನು ಒಗ್ಗೂಡಿಸಿ ಮಠದ ಜಾತ್ರೆ ಸಮಯದಲ್ಲಿ ವಿಶೇಷ ಜನಪದ ಜಾಗೃತಿ ಕಾರ್ಯಕ್ರಮನ್ನು ಸೊರಬ ತಾಲೂಕು ಕನ್ನಡ ಜಾನಪದ ಪರಿಷತ್ ಘಟಕದ ವತಿಯಿಂದ ಏರ್ಪಡಿಸಲಾಗುವುದು ಎಂದು ತಿಳಿಸಿದರು.

ಮಠದಿಂದ ಮಟ್ಟಕ್ಕೆ ಜಾನಪದ ಕಾರ್ಯಕ್ರಮವನ್ನು ಸಹ ಸೊರಬ ತಾಲೂಕಿನಲ್ಲಿ ವಿಶೇಷವಾಗಿ ಏರ್ಪಡಿಸಲಾಗುವುದು ಎಂದು ಡಾ ಜಾನಪದ ಬಾಲಾಜಿ ತಿಳಿಸಿದರು.

ಇದೇ ಸಂದರ್ಭದಲ್ಲಿ
ಶ್ರೀಗಳು ಬಾಲಾಜಿ ಅವರನ್ನು ಮಠದ ವತಿಯಿಂದ ಗೌರವಿಸಿದರು.

ಕನ್ನಡ ಜಾನಪದ ಪರಿಷತ್ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಮಹೇಂದ್ರ ಜಾದವ್, ಧಾರವಾಡ ಜಿಲ್ಲಾ ಕನ್ನಡ ಜಾನಪದ ಪರಿಷತ್ ಕಾರ್ಯದರ್ಶಿ ಸದಾನಂದ ಎಂ, ಶಿವಮೊಗ್ಗ ಜಿಲ್ಲಾ ಜಾನಪದ ಯುವ ಬ್ರಿಗೇಡ್ ಸಹ ಸಂಚಾಲಕ ಸಂತೋಷ್ ಆರ್, ಜಯಲಕ್ಷ್ಮಿ ಎಸ್ ಉಪಸ್ಥಿತರಿದ್ದರು.