(ವರದಿ:ಸಿದ್ದರಾಜು,ಕೊಳ್ಳೇಗಾಲ)
ಹನೂರು: ಗಂಗ ಕಲ್ಯಾಣ ಯೋಜನೆ ಫಲಾನುಭವಿಗಳು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕರ್ನಾಟಕ ಆದಿಜಾಂಬವ ಅಭಿವೃದ್ದಿ ನಿಗಮದ ವತಿಯಿಂದ ಗಂಗಾಕಲ್ಯಾಣ ಯೋಜನೆಯಡಿ ಆಯ್ಕೆಯಾಗಿ ಕೊಳವೆ ಬಾವಿಯಲ್ಲಿ ನೀರು ಬಂದಿರುವ ಫಲಾನುಭವಿಗಳಿಗೆ ಮೋಟಾರ್ ಸ್ವಿಚ್ ಬೋರ್ಡ್, ಪೈಪ್, ಕೇಬಲ್ ಇನ್ನಿತರ ವಿಧ್ಯುತ್ ಪೂರಕ ಪರಿಕರ ಸಾಮಗ್ರಿಗಳನ್ನು ವಿತರಣೆ ಮಾಡಿ ಮಾತನಾಡಿದ ಶಾಸಕರು,
ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಖುಷ್ಕಿ ಭೂಮಿಯಲ್ಲಿ ಮಳೆಯನ್ನೇ ಆಶ್ರಯಿಸಿ ವ್ಯವಸಾಯ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು.
ರೈತರು ಸರ್ಕಾರ ನೀಡುತ್ತಿರುವ ಇಂತಹ ಉತ್ತಮ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲೀಕರಣ ಹೊಂದಬೇಕು,ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ರೖತರಿಗೆ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನ ಮಾಡಲಾಗುವುದು ಎಂದು ಎಂ.ಆರ್.ಮಂಜುನಾಥ್
ಭರವಸೆ ನೀಡಿದರು.
ಈ ವೇಳೆ ಅಂಬೇಡ್ಕರ್ ನಿಗಮದ ಜಿಲ್ಲಾ ವ್ಯವಸ್ಥಾಪಕ ರಾಜು, ಹರೀಶ್, ಚಾಮುಲ್, ಉದ್ದನೂರು ಪ್ರಸಾದ್, ಚಿನ್ನವೆಂಕಟ, ಗೋವಿಂದ, ವೆಂಕಟೇಶ, ಸಾವುಕಯ್ಯ, ಹನೂರು ಪ.ಪಂ.ಸದಸ್ಯರಾದ ಮಹೇಶ್, ಮಹೇಶ್ ನಾಯಕ ಹಾಗೂ ಫಲಾನುಭವಿಗಳು, ಮುಖಂಡರು ಹಾಜರಿದ್ದರು.