ಭಕ್ತಿ-ಭಾವದಿಂದ ನಡೆದ ಸಾಮೂಹಿಕ ಯಜುರುಪಾಕರ್ಮ

Spread the love

ಮೈಸೂರು: ಶ್ರೀರಾಮಚಂದ್ರಾಪುರ ಮಠದ ಹವ್ಯಕ ಮಹಾಮಂಡಲದ ಮೈಸೂರು ವಲಯದ ವತಿಯಿಂದ ಬೋಗಾದಿ, ಸಾಯಿ ಸರಸ್ವತಿ ವಿದ್ಯಾಕೇಂದ್ರದ ಆವರಣದಲ್ಲಿ ತ್ರಿಮತಸ್ಥ ಬ್ರಾಹ್ಮಣರಿಗೆ ಸಾಮೂಹಿಕ ಯಜುರುಪಾಕರ್ಮ ಆಯೋಜಿಸಲಾಗಿತ್ತು.

ಉತ್ಸರ್ಜನ ಅಂಗವಾಗಿ ಬಲಿ, ಮಾತ-ಪಿತೃ, ಗುರುಗಳ ಸ್ಮರಿಸಿ ಹೋಮ, ಉಪಾಕರ್ಮ ಅಂಗವಾಗಿ ನೂತನ ಯಜ್ಞೋಪವೀತ ಧಾರಣೆ, ವಿಸರ್ಜನೆ ಹಾಗೂ ಮಹಾತರ್ಪಣ ನಡೆಯಿತು.

ಕಾರ್ಯಕ್ರಮದಲ್ಲಿ ಮೈಸೂರು ವಲಯದ ಅಧ್ಯಕ್ಷರಾದ ಜಿ.ಆರ್. ಮೋಹನ್ ಮಂಕಾಳ, ಪ್ರಧಾನ ಕಾರ್ಯದರ್ಶಿ ರಾಕೇಶ್ ಭಟ್, ಕೋಶಾಧಿಕಾರಿ ಪಡಾರು ರಾಮಕೃಷ್ಣ ಭಟ್, ಉಪಾಧ್ಯಕ್ಷರಾದ ಡಿ. ಶಂಕರನಾರಾಯಣ ಶಾಸ್ತ್ರಿ, ಸಂಘಟನಾ ಕಾರ್ಯದರ್ಶಿ ಸಂಪ ಕೃಷ್ಣಮೂರ್ತಿ, ಮುಖಂಡರಾದ ಬೇತ ಕೃಷ್ಣ ಭಟ್, ಕೆ.ಎಸ್. ಸದಾಶಿವ, ರಾಮಕೃಷ್ಣ ಹೆಗಡೆ ನಿಸ್ರಾಣಿ, ಗಿರಿಜಾಶಂಕರ್, ಕೃಷ್ಣ ಹೆಗಡೆ, ಮೋಹನ ಪ್ರಶಾಂತ, ರಾಜಶೇಖರ್, ಕೊಕ್ಕಡ ವೆಂಕಟರಮಣ ಭಟ್, ವಿನಯಚಂದ್ರ ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು.

ವಲಯದ ವೈದಿಕ ವಿಭಾಗದ ಮುಖ್ಯಸ್ಥರಾದ ಶಂಭು ಉಪಾಧ್ಯಾಯ ಅವರ ನೇತೃತ್ವದಲ್ಲಿ ಹೋಮ ಹಾಗೂ ಪೂಜಾ ವಿಧಿಗಳು ನೆರವೇರಿತು.