ಮೈಸೂರು: ಟ್ರೈಟಾನ್ ವಲ್ವ್ಸ್ ಲಿಮಿಟೆಡ್ ತನ್ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮಾರುತಿ ವಿ ಗೋಕರ್ಣ ಅವರ 92ನೇ ಜನ್ಮದಿನದ ನೆನಪಿಗಾಗಿ ರಕ್ತದಾನ ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಿತ್ತು.

ಮೈಸೂರಿನಲ್ಲಿ ರಕ್ತದಾನ ಶಿಬಿರವನ್ನು
ಟ್ರೈಟಾನ್ ವಲ್ವ್ಸ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ಆದಿತ್ಯ ಎಂ ಗೋಕರ್ಣ ಅವರು ಉದ್ಘಾಟಿಸಿದರು.
ರಕ್ತದ ಕೊರತೆಯನ್ನು ಪರಿಹರಿಸಲು ಮತ್ತು ರಕ್ತದಾನದ ಪ್ರಾಮುಖ್ಯತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವುದಾಗಿ ಈ ವೇಳೆ ಆದಿತ್ಯ ತಿಳಿಸಿದರು.
ಜೀವಧಾರ ಬ್ಲಡ್ ಬ್ಯಾಂಕ್ ಮತ್ತು ಮೈಸೂರು ಭಾರತ್ ಕ್ಯಾನ್ಸರ್ ಆಸ್ಪತ್ರೆ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ ಸಂಸ್ಥೆಯ ಉದ್ಯೋಗಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
