ಮೈಸೂರು: ಅರಿವು ಸಂಸ್ಥೆಯ 13ನೇ ವಾರ್ಷಿಕೋತ್ಸವದ ಅಂಗವಾಗಿ ಗೋ ಸಂರಕ್ಷಣಾ ಜಾಗೃತಿ ಮತ್ತಿತರ ಕಾರ್ಯಕ್ರಮವನ್ನು ಮಾರ್ಚ್ 3ರಂದು ಹಮ್ಮಿಕೊಳ್ಳಲಾಗಿದೆ.
ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಮಾರ್ಚ್ 3ರ ಬೆಳಗ್ಗೆ 11 ಗಂಟೆಗೆ ಗೋ ಸಂರಕ್ಷಣಾ ಜಾಗೃತಿ,
ಗೋಪೂಜೆ ಹಾಗೂ ಗೋವುಗಳಿಗೆ ಮೇವು ವಿತರಣೆ ಕಾರ್ಯಕ್ರಮವನ್ನು ಎಂದು ಅರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್ ತಿಳಿಸಿದ್ದಾರೆ.
ಬಸಳ್ಳಿ ಹುಂಡಿ ದಾಸೋಹ ಮಠದ ಶ್ರೀ ಬಸವರಾಜು ಸ್ವಾಮೀಜಿ,
ಮಡಿವಾಳ ಮಠದ ಶ್ರೀ ಅಡವಿಸ್ವಾಮೀಜಿ,
ಮೂಡ ಮಾಜಿ ಅಧ್ಯಕ್ಷ ಎಚ್ ವಿ ರಾಜೀವ್,ಕಲ್ಯಾಣ ಮಂಡಳಿಯ ರಾಜ್ಯ ಅಧ್ಯಕ್ಷ ಎಸ್ ಕೆ ಮಿತ್ತಲ್,
ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ,ನಗರ ಪಾಲಿಕೆ ಮಾಜಿ ಸದಸ್ಯರಾದ ಮಾ ವಿ ರಾಮಪ್ರಸಾದ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ,
ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.