ಮನಮೋಹನ್ ಸಿಂಗ್ ಅವರಿಗೆ ಮೈಸೂರು ಜಿಲ್ಲಾ- ನಗರ ಕಾಂಗ್ರೆಸ್ ನಿಂದ ಶ್ರದ್ಧಾಂಜಲಿ

ಮೈಸೂರು: ಭಾರತ ಕಂಡ ಶ್ರೇಷ್ಠ ನಾಯಕ ಹಾಗೂ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಮೈಸೂರು ಜಿಲ್ಲಾ ಮತ್ತು ನಗರ ಕಾಂಗ್ರೆಸ್ ವತಿಯಿಂದ ಗೌರವಪೂರ್ವ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮೈಸೂರಿನ ರೈಲ್ವೆ ನಿಲ್ದಾಣದ ಬಳಿ ಇರುವ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಡಾ. ಮನಮೋಹನ್ ಸಿಂಗ್ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸೂಚಿಸಲಾಯಿತು.

ಈ ವೇಳೆ ಮಾತನಾಡಿದ ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್, ಜಗತ್ತಿನ ಆರ್ಥಿಕ ಭೂಪಟದಲ್ಲಿ ಭಾರತದ ಅರ್ಥ ವ್ಯವಸ್ಥೆಗೆ ಸಾರ್ಥಕ ಹಾಗೂ ಶ್ರೇಷ್ಠ ಸ್ಥಾನ ಕಲ್ಪಿಸಿದ ಮತ್ತು ಭಾರತದ ವೈಜ್ಞಾನಿಕ ಮತ್ತು ಆರ್ಥಿಕ ಕ್ರಾಂತಿಗೆ ಮುನ್ನುಡಿ ಬರೆದ ಡಾಕ್ಟರ್ ಮನಮೊಹನ್ ಸಿಂಗ್ ಶಭಾಷ್ ಗಿರಿಯೇ ಜನಪರ ಯೋಜನೆಗಳಿಗೆ ಸ್ಪೂರ್ತಿ ಎಂದು ಹೇಳಿದರು‌.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್, ನಗರ ಅಧ್ಯಕ್ಷ ಮೂರ್ತಿ, ನಾಗೇಶ್, ಈಶ್ವರ ಚಾಕಡಿ, ಡೈರಿ ವೆಂಕಟೇಶ್,ರಾಜೇಶ್ವರಿ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.