ಮೈಸೂರು: ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲ ಬಿಜೆಪಿ ವತಿಯಿಂದ ರಾಮಕೃಷ್ಣ ನಗರದ ಐ ಬ್ಲಾಕಿನಲ್ಲಿ ಮನೆ ಮನೆಗೂ ಸ್ವದೇಶಿ ಅಭಿಯಾನ ಹಮ್ಮಿಕೊಳ್ಳಲಾಯಿತು.
ಪ್ರತಿ ಮನೆಗೂ ಸ್ವದೇಶಿ ಭಿತ್ತಿಪತ್ರ ಅಂಟಿಸಿ ಹಾಗೂ ಆತ್ಮನಿರ್ಭರ ಭಾರತದ ಕರಪತ್ರವನ್ನು ನೀಡಿ ಸ್ವದೇಶಿ ವಸ್ತುಗಳನ್ನು ಬಳಸಿ ಆತ್ಮನಿರ್ಭರ ಭಾರತವನ್ನು ನಿರ್ಮಿಸಲು ಸಹಕರಿಸುವಂತೆ ನಾಗರೀಕರನ್ನು ಕೋರಿ ಜಾಗೃತಿ ಮೂಡಿಸಲಾಯಿತು.
ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ಅಧ್ಯಕ್ಷರಾದ ರಾಕೇಶ್ ಭಟ್, ಪಾಲಿಕೆ ಮಾಜಿ ಸದಸ್ಯರಾದ ಲಕ್ಷ್ಮಿ ಕಿರಣ್, ಪ್ರಧಾನ ಕಾರ್ಯದರ್ಶಿ ಆರ್. ಸೋಮಶೇಖರ್, ಉಪಾಧ್ಯಕ್ಷರಾದ ಶಿವು ಪಟೇಲ್ ಬಿ.ಸಿ. ಶಶಿಕಾಂತ್, ಹೆಚ್.ಎಸ್. ಹಿರಿಯಣ್ಣ, ವಾರ್ಡ್ ಅಧ್ಯಕ್ಷರಾದ ಬಸವಣ್ಣ, ಪ್ರಮುಖರಾದ ಬಸವಲಿಂಗಪ್ಪ, ಮಂಡಲದ ಎಸ್. ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್. ಮಹೇಶ್ ಕುಮಾರ್ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಎ. ರಾಘವೇಂದ್ರ ಸೇರಿದಂತೆ ಸ್ಥಳೀಯರು ಅಭಿಯಾನದಲ್ಲಿ ಭಾಗವಹಿಸಿದ್ದರು.
