ಶ್ರೀ ಮಹಾಗುಣ ನಿಲಯದಲ್ಲಿಮನೆ ಮನೆಗೆ ಕವಿಗೋಷ್ಠಿ‌

Spread the love

ಮೈಸೂರು: ಮನೆ ಮನೆಗೆ ಕವಿಗೋಷ್ಠಿ ಮತ್ತು ಸ್ವಾಮಿ ವಿವೇಕಾನಂದ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಜನಪರ ಸಾಹಿತ್ಯ ಪರಿಷತ್ ಬೆಂಗಳೂರು,ಎಸ್ ಎಮ್ ಜಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ
ಹಮ್ಮಿಕೊಳ್ಳಲಾಯಿತು.

ಇಲವಾಲ,ಮೈಸೂರು-ಹುಣಸೂರು ಮೇನ್ ರೋಡ್,ಎಸ್ ಎಮ್ ಜಿ ಲೇಔಟ್,
ಡಾಕ್ಟರ್ ನಂಜುಂಡಸ್ವಾಮಿ ಹರದನಹಳ್ಳಿ ಅವರ ನಿವಾಸ ಶ್ರೀ ಮಹಾಗುಣ ನಿಲಯದಲ್ಲಿ ಮನೆ ಮನೆಗೆ ಕವಿಗೋಷ್ಠಿ ಮತ್ತು ಸ್ವಾಮಿ ವಿವೇಕಾನಂದ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ನೆರವೇರಿಸಿದರು.

ಅಧ್ಯಕ್ಷತೆ ಯನ್ನು ಜನಪರ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಎಂ ಮಹೇಶ್ ಚಿಕ್ಕಲ್ಲೂರು ವಹಿಸಿದ್ದರು. ಕೃತಿ ಬಿಡುಗಡೆಯನ್ನು ಕನ್ನಡ ಪ್ರಭ ದಿನಪತ್ರಿಕೆ ಮೈಸೂರು, ಕಾರ್ಯನಿರ್ವಾಹಕ ಸಂಪಾದಕರು ಅಂಶಿ ಪ್ರಸನ್ನ ಕುಮಾರ್ ನೆರವೇರಿಸಿದರು.

ಪ್ರಾಸ್ತವಿಕ ಭಾಷಣವನ್ನು ದೊರೆಸ್ವಾಮಿ ಅವರು ನೆರವೇರಿಸಿದರು. ಕೃತಿಕಾರರು ಡಾ. ನಂಜುಂಡಸ್ವಾಮಿ ಹರದನಹಳ್ಳಿ. ಪ್ರಾಂಶುಪಾಲರು ಸ. ಪ್ರ. ದ. ಕಾಲೇಜು ಪಿರಿಯಪಟ್ಟಣ, ಮುಖ್ಯ ಅತಿಥಿಗಳಾಗಿ ನಿಂಗರಾಜು ಅಧ್ಯಕ್ಷರು ಶ್ರೀಗಂಧ ಲಯನ್ಸ್ ಕ್ಲಬ್ ಮೈಸೂರು ಡಾ. ಪ್ರೇಮಾ ಪಿ.ಕೆ ಮೊಳೆ ರಾಜ್ಯ ನಿರ್ದೇಶಕರು ಜನಪರ ಸಾಹಿತ್ಯ ಪರಿಷತ್ತು, ಸುಚಿತ್ರ ಹೆಗಡೆ ಕವಿಯಾತ್ರಿ ಮೈಸೂರು, ಚೆಲುವರಾಜು ಎಚ್ ಎಲ್. ಸಾಹಿತಿ ಮತ್ತು ಪ್ರಯೋಗಾಲಯ ತಾಂತ್ರಿಕ ಅಧಿಕಾರಿ, ಸಿದ್ದರಾಮೇಗೌಡ ಹಿರಿಯ ನಾಗರಿಕರು ಮೈಸೂರು, ಕವಿಗಳು. ಡಾ. ಪುಟ್ಟರಾಜು, ಬಸಪ್ಪ ಸಿ ನಾಲ್ವಡಿ,ನಾಗರಾಜ್ ಕುಮಾರ್, ಮುಕುಂದ ಎಂಆರ್, ಕಾರ್ತಿಕ್ ನಾಯಕ್, ಕೆಂಪರಾಜು,ಪುಷ್ಪ, ಪಾದ್ಯಾಕಿ ಸತ್ಯಾ ಗಣಪತಿ ಭಟ್, ಯಶೋಧ, ಭಾಗ್ಯ ಗಿರೀಶ್, ಕೃಷ್ಣಕುಮಾರ್ ಭಾಗವಹಿಸಿದ್ದರು.