ಫ್ಲಾಟ್ ಮಾರಾಟ ಮಾಡಲು ಅಡ್ಡಿ:ಮನನೊಂದು ವ್ಯಕ್ತಿ ನಾಪತ್ತೆ

Spread the love

ಮೈಸೂರು: ಅಪಾರ್ಟ್ ಮೆಂಟ್ ನಲ್ಲಿ ಫ್ಲಾಟ್ ಮಾರಾಟ ಮಾಡಲು ಅಡ್ಡಿಪಡಿಸಿದ ಬಾಡಿಗೆದಾರನ ವರ್ತನೆಗೆ ಪಿ ಹೆಚ್ ಡಿ ವ್ಯಾಸಂಗ ಮಾಡುತ್ತಿದ್ದ ವ್ಯಕ್ತಿ ಮನನೊಂದು ನಾಪತ್ತೆಯಾಗಿರುವ ಪ್ರಕರಣ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.

ಈ ಬಗ್ಗೆ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಬೈ ಮೂಲದ ಸತೀಶ್ ಚಂದ್ರ ನಾಪತ್ತೆಯಾಗಿದ್ದಾರೆ.ಪತಿಯನ್ನ ಹುಡುಕಿಕೊಡುವಂತೆ ಪತ್ನಿ ರಮ್ಯ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದಾರೆ.

ಸತೀಶ್ ಚಂದ್ರ ಅವರು ಮುಂಬೈನ ಟಾಟಾ ಇನ್ಸ್ ಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ನಲ್ಲಿ ಪಿ ಹೆಚ್ ಡಿ ವ್ಯಾಸಂಗ ಮಾಡುತ್ತಿದ್ದರು.ಮೈಸೂರು ವಿಭಾಗದ ಬಗ್ಗೆ ಹೆಚ್ಚಿನ ರಿಸರ್ಚ್ ಮಾಡಲು ಮೈಸೂರಿಗೆ ಬಂದಿದ್ದರು.

ಮೈಸೂರಿನ ಹೂಟಗಳ್ಳಿಯಲ್ಲಿ ಪತ್ನಿ ರಮ್ಯ ಅಪಾರ್ಟ್ ಮೆಂಟ್ ನಲ್ಲಿ ಫ್ಲಾಟ್ ಖರೀದಿಸಿದ್ದರು.ಫ್ಲಾಟ್ ನಲ್ಲಿ ಕುಶಾಲಪ್ಪ ಎಂಬುವರು ಬಾಡಿಗೆಗೆ ಇದ್ದರು.

ಸತೀಶ್ ಚಂದ್ರ ಸವರಿಗೆ ಆರ್ಥಿಕ ಸಮಸ್ಯೆ ಎದುರಾಗಿ ಫ್ಲಾಟ್ ಮಾರಾಟ ಮಾಡಲು ಮುಂದಾಗಿದ್ದರು.ಆದರೆ ಕುಶಾಲಪ್ಪ ಅವರು ಸಹಕರಿಸದ ಕಾರಣ ಮಾರಾಟ ಮಾಡಲು ಸಾಧ್ಯವಾಗಿಲ್ಲ.

ಇದರಿಂದ ಮನನೊಂದ ಸತೀಶ್ ಚಂದ್ರ ಇದೇ ಫೆ.22 ರಂದು ಮನೆಬಿಟ್ಟು ಹೋಗಿದ್ದಾರೆ.
ಸತೀಶ್ ಚಂದ್ರ ಅವರನ್ನ ಎಲ್ಲಾ‌ ಕಡೆ ಹುಡುಕಿ ಪತ್ತೆಯಾಗದ ಹಿನ್ನಲೆಯಲ್ಲಿ ಪತ್ನಿ ರಮ್ಯ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.