ಪತ್ನಿ, ಮೂರು ವರ್ಷದ ಮಗುವನ್ನು ಕೊಂ*ದು ಪರಾರಿಯಾದ ಪತಿ

Spread the love

ಅಯೋಧ್ಯೆ: ವ್ಯಕ್ತಿಯೊಬ್ಬ ಪತ್ನಿ ಹಾಗೂ ಮೂರು ವರ್ಷದ ಮಗುವನ್ನು ಕೊಂದು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದಿದೆ.

ಮಹಿಳೆ ಮತ್ತು ಆಕೆಯ ಮೂರು ವರ್ಷದ ಮಗು ಶವವಾಗಿ ಪತ್ತೆಯಾಗಿದ್ದಾರೆ.

ಶಹಜನ್ ಖಂಡಕರ್ ಎಂಬಾತ ಈ ಕೃತ್ಯ ಎಸಗಿ ಓಡಿಹೋಗಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಧಾವಿಸಿ ತನಿಖೆ ಮಾಡುತ್ತಿದ್ದಾರೆ.

ಬಚ್ರಾ ಸುಲ್ತಾನ್‌ಪುರ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು,
ಗುವಾಹಟಿಯ ಸುಮಾರು 40 ಕುಟುಂಬಗಳು ತಾತ್ಕಾಲಿಕ ಮನೆಗಳಲ್ಲಿ ವಾಸಿಸುತ್ತಿದ್ದು, ತ್ಯಾಜ್ಯ ಸಂಗ್ರಹಿಸುವ ಕೆಲಸ ಮಾಡುತ್ತಾರೆ.

ಆರೋಪಿಯು ನಿನ್ನೆ ರಾತ್ರಿ 35 ವರ್ಷದ ಪತ್ನಿ ಮತ್ತು ಮಗನನ್ನು ಕೊಂದು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇವರು ಅಸ್ಸಾಮ್ ಮೂಲದವರು ಇಲ್ಲಿ ಅನಧಿಕೃತವಾಗಿ ವಾಸ ಮಾಡುತ್ತಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ.

ಕೊಲೆಗೂ ಮೊದಲು ಮೊದಲನೆ ಮಗನನ್ನು ಹೊರಗೆ ಮಲಗಲು ಹೇಳಿದ್ದಾನೆ, ನಂತರ,ಪತ್ನಿಯ ಮುಖಕ್ಕೆ ಹರಿತವಾದ ವಸ್ತುವನ್ನು ಬಳಸಿ ಹಲ್ಲೆ ನಡೆಸಿದ್ದಾನೆ. ನಂತರ ಕಿರಿಯ ಮಗುವನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿರಿಯ ಮಗ ಮರುದಿನ ಬೆಳಗ್ಗೆ ಗುಡಿಸಲು ಒಳಗೆ ಹೋದಾಗ ತಾಯಿ ಹಾಗೂ ತಮ್ಮ ಬರ್ಬರವಾಗಿ ಹತ್ಯೆಯಾಗಿರುವುದನ್ನು ಕಂಡು ಅಕ್ಕಪಕ್ಕದವರನ್ನು ಕೂಗಿದ್ದಾನೆ.

ತಕ್ಷಣ ಅಕ್ಕಪಕ್ಕದ ಮನೆಯರು ಬಂದು ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಪ್ರದೇಶವನ್ನು ಪರೀಕ್ಷಿಸಲು ವಿಧಿವಿಜ್ಞಾನ ತಂಡವನ್ನು ಕರೆತಂದು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.