ಬೆಂಗಳೂರು: ಜಮ್ಮು-ಕಾಶ್ಮೀರದಲ್ಲಿ ಚುನಾವಣಾ ಪ್ರಚಾರದ ಭಾಷಣದ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಸ್ವಸ್ಥರಾದ ಘಟನೆ ನಡೆದಿದೆ.
ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಗೆ ನ್ಯಾಷನಲ್ ಕಾನ್ಫರೆನ್ಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಅಕ್ಟೋಬರ್ 1ರಂದು ನಡೆಯಲಿರುವ ಕೊನೇ ಹಂತದ ಚುನಾವಣೆಗೆ ಕಥುವಾದಲ್ಲಿ ಬಿರುಸಿನ ಪ್ರಚಾರ ನಡೆಸಿದೆ.
ಚುನಾವಣಾ ಪ್ರಚಾರದ ಸಭೆಯಲ್ಲಿ ಭಾಷಣ ಮಾಡುತ್ತಿದ್ದಾಗ ಮಲ್ಲಿಕಾರ್ಜುನ ಖರ್ಗೆ ಅವರು ಏಕಾಏಕಿ ಅಸ್ವಸ್ಥರಾದರು.
ತಕ್ಷಣ ವೇದಿಕೆಯಲ್ಲಿದ್ದ ನಾಯಕರು ಅವರನ್ನು ಹಿಡಿದುಕೊಂಡು ನೀರನ್ನು ಕುಡಿಸಿದರು.ಆಗ ಸುಧಾರಿಸಿಕೊಂಡ ಖರ್ಗೆ ಮತ್ತೆ ಮಾತನಾಡಲು ಪ್ರಯತ್ನಿಸಿದರು ಆದರೆ ಸಾಧ್ಯವಾಗಲಿಲ್ಲ,ನಂತರ ಕುರ್ಚಿಯಲ್ಲಿ ಕುಳಿತೇ ಭಾಷಣ ಮಾಡಿದರು.
ನಿರಂತರ ಪ್ರಯಾಣದಿಂದಾದ ಆಯಾಸದಿಂದಾಗಿ ಮಲ್ಲಿಕಾರ್ಜುನ ಖರ್ಗೆಯವರು ಅಸ್ವಸ್ಥತರಾದರು ಮುಂದಿನ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಲಿಲ್ಲ ರೆಸ್ಟ್ ಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.