ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯಾಗಿಸಿ:ಪ್ರೊ.ಬೋರಲಿಂಗಯ್ಯ

Spread the love

ಮೈಸೂರು: ಮಕ್ಕಳಿಗಾಗಿ ಆಸ್ತಿ,ಹಣ ಕೂಡಿಡುವ ಬದಲು ಉತ್ತಮ, ಸಂಸ್ಕಾರವಂತ, ಆರೋಗ್ಯವಂತ ಮಕ್ಕಳನ್ನಾಗಿ ರೂಪಿಸಬೇಕು ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ. ಎನ್
ಬೋರಲಿಂಗಯ್ಯ ಸಲಹೆ ನೀಡಿದರು.

ರೋಟರಿ ಕ್ಲಬ್ ಆಫ್ ಮೈಸೂರ್ ವೆಸ್ಟ್, ಅಥರ್ವ ಲೈಫ್ ಸ್ಕಿಲ್ಸ್ ಫೌಂಡೇಶನ್, ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ವೆಸ್ಟ್ ಹಾಗೂ ಜೆಸಿಐ ಮೈಸೂರು ಸಿಲ್ಕ್
ಸಂಯುಕ್ತಾಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಮಕ್ಕಳಿಗಾಗಿ ಆಸ್ತಿ,ಹಣ ಮಾಡದೆ ಮಕ್ಕಳನ್ನೇ ನಮ್ಮ ಆಸ್ತಿಯನ್ನಾಗಿಸಬೇಕಿದೆ ಎಂದು ಹೇಳಿದರು.

ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಗು ಒಂದಕ್ಕೊಂದು ಅವಿನಾಭಾವ ಸಂಬಂಧ ಇದೆ,ಮಕ್ಕಳಿಗೆ ಈಗಿನಿಂದಲೇ ನಾಡು, ನುಡಿ, ಭಾಷೆ, ನೆಲ, ಜಲದ ಕುರಿತು ಅಭಿಮಾನ ಮೂಡಿಸಲು ಇದು ಸಹಕಾರಿ ಆಗುತ್ತದೆ ಎಂದು ಪ್ರೊ.ಬೋರಲಿಂಗಯ್ಯ ಹೇಳಿದರು.

ಮಹಾಜನ ಕಾಲೇಜು
ಪ್ರಾಂಶುಪಾಲರಾದ ಡಾ।। ಬಿ.ಆರ್. ಜಯಕುಮಾರಿ,ರೋಟರಿ ಕ್ಲಬ್ ಆಫ್ ಮೈಸೂರು ವೆಸ್ಟ್ ಅಧ್ಯಕ್ಷ ನಾಗೇಶ್ ಎಂ ಎಸ್,ರೋಟರಿ ವೆಸ್ಟ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ|| ಬಿ. ಚಂದ್ರ,ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ವೆಸ್ಟ್ ಅಧ್ಯಕ್ಷೆ ಶಶಿಕಲಾ ಸುರೇಶ್,ಅಥರ್ವ ಲೈಫ್ ಸ್ಕಿಲ್ಸ್ ಫೌಂಡೇಶನ್ ಅಧ್ಯಕ್ಷೆ ಪುಷ್ಪಲತಾ,ಜೆಸಿಐ ಮೈಸೂರು ಸಿಲ್ಕ್ ಅಧ್ಯಕ್ಷ ಬಿ. ಎಂ. ರುದ್ರೇಶ, ರುಕ್ಮಿಣಿ,ನಾಗೇಶ್ ಎಂ ಎಲ್ ದೇವರಾಜು ,
ಚಂದ್ರ ,ಶಶಿಕಲಾ ,ಭವಾನಿ ಚಂದ್ರ,
ಪುಷ್ಪಲತಾ,ರುದ್ರೇಶ್ ,ಅನುಷ ,ಲಾವಣ್ಯ ಮತ್ತಿತರರು ಹಾಜರಿದ್ದರು.