ಮೈಸೂರು: ಇಂದಿನ ಮಕ್ಕಳಲ್ಲಿ ಭಾರತೀಯ ಕಲೆ, ಸಂಸ್ಕೃತಿಗಳು ಮಾಯವಾಗಿ, ಮೊಬೈಲ್ ಗೀಳು ಬೆಳೆಯುತ್ತಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮುಕ್ತ ಗಂಗೋತ್ರಿ ಪ್ರಾಧ್ಯಾಪಕರಾದ ಪವಿತ್ರ ಆರ್ ಎಚ್ ವಿಷಾದಿಸಿದರು.
ಪಾಲಕರು, ಸಂಘ ಸಂಸ್ಥೆಗಳು ಮಕ್ಕಳ ಮೊಬೈಲ್ ಗೀಳಿನ ಕಡೆ ಗಮನ ಹರಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಕಲೆ, ಸಂಸ್ಕೃತಿಯ ಅರಿವು ಮೂಡಿಸಬೇಕಿದೆ ಅವರು ತಿಳಿಸಿದರು
ಭಾನುವಾರ ಬಿ ಎನ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಮಲೆ ಮಾದೇಶ್ವರ ಸೇವಾ ಸಂಸ್ಥೆ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲೆ ಮತ್ತು ಸಂಸ್ಕೃತಿ ನಶಿಸಿ ಹೋಗುತ್ತಿರುವ ಸಮಯದಲ್ಲಿ ಮಕ್ಕಳಿಗೆ ನಮ್ಮ ಭಾರತದ ಸಂಸ್ಕೃತಿ ಬಗ್ಗೆ ತಿಳಿಸುವುದು ಪಾಲಕರ ಮೊದಲ ಆದ್ಯತೆಯಾಗಲಿ ಎಂದು ಪವಿತ್ರ ಸಲಹೆ ನೀಡಿದರು.
ಮನೋರೋಗ ತಜ್ಞೆ ಡಾಕ್ಟರ್ ರೇಖಾ ಮನಃಶಾಂತಿ ಅವರು ಮಾತನಾಡಿ,
ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಮಗ್ರ ಅಭಿವೃದ್ಧಿ ಸಾಧ್ಯ. ಮಕ್ಕಳಿಗೆ ಕೇವಲ ಪುಸ್ತಕದ ಜ್ಞಾನ ನೀಡದೆ ಪತ್ಯೇತರ ಚಟುವಟಿಕೆಗೆ ಒತ್ತು ನೀಡಬೇಕಿದೆ. ಹಿರಿಯರಿಗೆ ಗೌರವ ಕೊಡುವ ಪ್ರವೃತ್ತಿಯನ್ನು ಬೆಳಸಬೇಕು ಎಂದು ತಿಳಿಸಿದರು
ಖ್ಯಾತ ವೈದ್ಯರು ಹಾಗೂ ಕಲಾ ಪೋಷಕರು ಡಾ.ರೇಖಾ ಅರುಣ್ ,ವಿಶೇಷ ಚೇತನ ಕ್ರೀಡಾಪಟು ಅಲೋಕ್ ಜೈನ್ ,ಸಮಾಜ ಸೇವಕರು ಗಗನ್ ದೀಪ್ ,ಸಮೃದ್ಧಿ ವಾರ್ತಾ ಪತ್ರಿಕೆ ಸಂಪಾದಕಿ ಸಹನಾ ಗೌಡ, ದಿ ಗ್ರಾಜುಯೇಟ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ವರಲಕ್ಷ್ಮಿ ಅಜಯ್, ಮಲೆ ಮಾದೇಶ್ವರ ಸೇವಾ ಸಂಸ್ಥೆ ಅಧ್ಯಕ್ಷ ಮಹಾನ್ ಶ್ರೇಯಸ್, ರೂಪದರ್ಶಿ ಸಾನಿಯಾ ಮತ್ತಿತರರು ಹಾಜರಿದ್ದರು.
