ಮೇಕ್ ಇನ್ ಇಂಡಿಯಾ ಪದಾರ್ಥಗಳ ಹೆಚ್ಚು ಬಳಸಲು ಶ್ರೀವತ್ಸ ಕರೆ

Spread the love

ಮೈಸೂರು: ಮೇಕ್ ಇನ್ ಇಂಡಿಯಾ ಪದಾರ್ಥಗಳನ್ನು ಹೆಚ್ಚು ಬಳಸಬೇಕೆಂದು ಶಾಸಕ ಶ್ರೀವತ್ಸ ಕರೆ ನೀಡಿದರು.

ಆತ್ಮ ನಿರ್ಭರ ಭಾರತದ ಮೈಸೂರು ನಗರ ಕಾರ್ಯಗಾರವನ್ನು ಭಾರತ ಮಾತೆಗೆ ಪುಷ್ಪ ನಮನ ಸಲ್ಲಿಸಿ, ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ನರೇಂದ್ರ ಮೊದಿಯವರ ಕಲ್ಪನೆಗೆ ಸಹಕಾರ ಕೊಡುವುದು ನಮ್ಮ ಕರ್ತವ್ಯ,ನಮ್ಮ ಸಂಸ್ಕೃತಿ, ಸಂಸ್ಕಾರ, ವೇಷ,ಭಾಷೆ ನಾವು ಬಳಸುವ ಪ್ರತಿಯೊಂದು ಕ್ಷಣವೂ ಕೂಡ ಮೇಕ್ ಇನ್ ಇಂಡಿಯಾ ಆಗಿರಬೇಕು ಎಂದು ತಿಳಿಸಿದರು.

ಭಾರತದೇಶದಲ್ಲಿ ಉತ್ಪಾದಿಸುವ ಪ್ರತಿಯೊಂದು ಪದಾರ್ಥಗಳನ್ನು ನಾವು ಹೆಚ್ಚು ಬಳಸುವ ಮೂಲಕ ದೇಶವನ್ನು ಆರ್ಥಿಕವಾಗಿ ಮುನ್ನಡೆಸಲು ಸಹಕಾರ ಕೊಡಬೇಕು ಎಂದು ಶ್ರೀವತ್ಸ ಕರೆ ನೀಡಿದರು.

ರಾಜ್ಯ ಸಹ ಸಂಚಾಲಕ ಎಸ್.ವಿ.ರಾಘವೇಂದ್ರ ಮಾತನಾಡಿ ನಗರದ ನಾಲ್ಕು ಮಂಡಲಗಳಲ್ಲಿ ಕಾರ್ಯಗಾರ ಮಾಡಬೇಕು, ನಂತರ ಸ್ವದೇಶಿ ಚಿಂತನೆಯನ್ನು ಬೂತ್ ಮಟ್ಟದ ಕಾರ್ಯಕರ್ತರಿಗೆ ತಿಳಿಸಬೇಕು ಸಾರ್ವಜನಿಕರಿಗೆ ಹಾಗೂ ಯುವಕರು,ಮಹಿಳೆಯರಿಗೆ ಆರ್ಥಿಕವಾಗಿ ಹಿಂದುಳಿದ ವರಿಗೆ ಸ್ವಾವಲಂಬಿಗಳನ್ನಾಗಿ ಮಾಡುವುದೆ ಅತ್ಮನಿರ್ಭರ ಕಾರ್ಯಗಾರದ ಕಲ್ಪನೆಯಾಗಿದೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ನಗರ ಅಧ್ಯಕ್ಷ ಎಲ್.ನಾಗೇಂದ್ರ,ರಾಜ್ಯ ಅಲ್ಪಸಂಖ್ಯಾತ ಮೊರ್ಚಾ ಅಧ್ಯಕ್ಷ ಅನಿಲ್ ಥಾಮಸ್, ಪ್ರಧಾನ ಕಾರ್ಯದರ್ಶಿ ಹೆಚ್.ಜಿ.ಗಿರೀಧರ್,ನಗರ ಸಂಚಾಲಕ ಗೋಕುಲ್ ಗೋವರ್ಧನ, ಮಾಜಿ ಉಪ ಮೇಯರ್ ವಿ. ಶೈಲೇಂದ್ರ, ಉಪಾಧ್ಯಕ್ಷ ಜೋಗಿ ಮಂಜು, ನಗರ ಪಾಲಿಕೆ ಮಾಜಿ ಸದಸ್ಯ ಸುಬ್ಬಯ್ಯ ಹಾಜರಿದ್ದರು.