ಅಹಿಂಸಾ ಮಾರ್ಗ ತೋರಿದ ಭಗವಾನ್ ಮಹಾವೀರರು- ಹರೀಶ್ ಗೌಡ

Spread the love

ಮೈಸೂರು: ನಗರದ‌ ದಿವಾನ್ಸ್ ರಸ್ತೆಯಲ್ಲಿನ
ಜೈನ್ಸ್ ಅಪಾರ್ಟ್ಮೆಂಟ್ ನಲ್ಲಿ
ಮೈಸೂರು ಯುವ ಬಳಗದ ವತಿಯಿಂದ
ಮಹಾವೀರರ 2624 ನೇ ಜಯಂತಿ ಹಮ್ಮಿಕೊಳ್ಳಲಾಯಿತು.

ಮಹಾವೀರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಆನಂತರ ಸಿಹಿ ವಿತರಿಸಿ ಶಾಸಕ ಹರೀಶ್ ಗೌಡ ಮಾತನಾಡಿದರು.

ಜೈನ ಧರ್ಮದ ಕೊನೆಯ ತೀರ್ಥಂಕರ ರಾಗಿದ್ದ ಭಗವಾನ್ ಮಹಾವೀರರು ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ತೋರಿಸಿದರು ನಾವು ಅದನ್ನು ಅನುಸರಿಸಬೇಕು ಎಂದು ಕರೆ ನೀಡಿದರು.

ಮನುಷ್ಯ ಹುಟ್ಟಿನಿಂದಲೇ ಶ್ರೇಷ್ಠನಾಗುವುದಿಲ್ಲ,ಸತ್ಯದ ಹಾದಿಯಲ್ಲಿ, ದಾರ್ಶನಿಕರ ತತ್ವ–ಸಿದ್ಧಾಂತಗಳನ್ನು ನಂಬಿ ನಡೆದಾಗ ಮನುಷ್ಯನ ಜೀವನ ಶ್ರೇಷ್ಠವಾಗುವುದು ಎಂದು ತಿಳಿಸಿದರು‌

ಕಾರ್ಯಕ್ರಮದಲ್ಲಿ ಹಂಸರಾಜ್ ಜೈನ್, ಕಾಂತಿಲಾಲ್ ಜೈನ್, ಗೌತಮ್ ಸಾಲೇಚ, ರಮೇಶ್ ಕಂಡೆ ವಾಲ್, ನರ್ಸಿಂಗ್ ಪ್ರಮಾರ್, ಪ್ರಕಾಶ್ ಜೈನ್, ಕಾಂತಿಲಾಲ್ ದಾದಾಲ್, ಶರವಣ್,ಗೌತಮ್ ಬಾಲಾಜಿ, ರವಿಚಂದ್ರ, ನವೀನ್, ಪ್ರಮೋದ್ ಗೌಡ,ಲೋಕೇಶ್, ಹೇಮಂತ್, ಜಗದೀಶ್ ಮತ್ತಿತರರು ಭಾಗವಹಿಸಿದ್ದರು.