ಮೈಸೂರು: ಮೈಸೂರಿನಲ್ಲಿ
ಮಹಾಶಿವರಾತ್ರಿ ಅಂಗವಾಗಿ ಹಿಂದೂ ಮುಸಲ್ಮಾನ್ ಬಾಂಧವರು ಜೊತೆಯಾಗಿ ಭಕ್ತಾದಿಗಳಿಗೆ ಮಜ್ಜಿಗೆ ವಿತರಿಸಿ ಸೌಹಾರ್ದತೆ ಮೆರೆದರು.
ಮೈಸೂರಿನ ಸಿದ್ಧಾರ್ಥ ನಗರದ ಬನ್ನೂರು ರಸ್ತೆಯಲ್ಲಿರುವ ಮಲೆ ಮಾದೇಶ್ವರ ದೇವಸ್ಥಾನದಲ್ಲಿ ಮಲೆ ಮಾದೇಶ್ವರ ಸೇವಾ ಸಂಸ್ಥೆ ವತಿಯಿಂದ ಶಿವರಾತ್ರಿ ಅಂಗವಾಗಿ ಭಕ್ತಾದಿಗಳಿಗೆ ಮಜ್ಜಿಗೆ ವಿತರಿಸಲಾಯಿತು ಈ ಸಂದರ್ಭದಲ್ಲಿ ಮುಸಲ್ಮಾನ್ ಬಂಧುಗಳು ಸಹ ಮಜ್ಜಿಗೆ ವಿತರಿಸಲು ಅವರ ಜೊತೆ ಕೈಜೋಡಿಸುವ ಮೂಲಕ ಸೌಹಾರ್ದತೆ ಮೆರೆದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಸಪ್ಪ ಅವರು,
ಎಲ್ಲರೂ ಪರಸ್ಪರ ಪ್ರೀತಿಸಬೇಕು ಎಂದು ಕರೆ ನೀಡಿದರು.
ಭಾರತ ಬಹುತ್ವದ ದೇಶ, ಎಲ್ಲಾ ಪ್ರಾಂತ್ಯಗಳ ಎಲ್ಲಾ ಧರ್ಮ, ಜಾತಿ, ಭಾಷೆಗಳವರು ಒಟ್ಟಾಗಿ ಬಾಳಬೇಕು ಎಂದು ಹೇಳಿದರು.
ಮನುಷ್ಯತ್ವ ಬಹಳ ದೊಡ್ಡದು, ಎಲ್ಲರೂ ಪರಸ್ಪರ ಪ್ರೀತಿಸಬೇಕು,ಪ್ರತಿಯೊಬ್ಬರೂ ಸಹಿಷ್ಣುತೆಯನ್ನು ಪಾಲಿಸಬೇಕು ಇನ್ನೊಂದು ಧರ್ಮವನ್ನು ಪ್ರೀತಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಹಾಗಾದಾಗ ಮಾತ್ರ ರಾಷ್ಟ್ರ ಸಮಾಜ ಹಾಗೂ ಎಲ್ಲ ಧರ್ಮಗಳೂ ಏಳಿಗೆಯಾಗುತ್ತದೆ ಎಂದು ಬಸವರಸಜ ಬಸಪ್ಪ ತಿಳಿಸಿದರು.

ಈ ಸಂದರ್ಭದಲ್ಲಿ ಮಲೆ ಮಾದೇಶ್ವರ ಸೇವಾ ಸಂಸ್ಥೆ ಅಧ್ಯಕ್ಷರಾದ ಮಹಾನ್ ಶ್ರೇಯಸ್,
ರಫೀಕ್ ,ಸಾಹೇಬ್, ಅಬ್ದುಲ್, ಸಫಿ,
ಮುತ್ತುರಾಜ್, ಮನುಕುಮಾರ್, ಸೋಮಣ್ಣ, ನಾಗೇಂದ್ರ ಮತ್ತಿತರರು ಹಾಜರಿದ್ದರು.