ಮೀರಜ್ ಜಂಕ್ಷನ್-ಬೆಳಗಾವಿ ನಡುವೆಖಾಯಂ ರೈಲು:ಶೆಟ್ಟರ್

Spread the love

ಬೆಳಗಾವಿ: ಮಹಾರಾಷ್ಟ್ರದ ಮೀರಜ್ ಜಂಕ್ಷನ್ ಮತ್ತು ಬೆಳಗಾವಿ ನಡುವೆ ಸಂಚರಿಸುತ್ತಿದ್ದ ತಾತ್ಕಾಲಿಕ ರೈಲನ್ನು ಖಾಯಂಗೊಳಿಸಿದ್ದು ಜನತೆ ಇದರ ಉಪಯೋಗ ಪಡೆಯಬೇಕೆಂದು ಸಂಸದ ಜಗದೀಶ ಶೆಟ್ಟರ್ ಕರೆ ನೀಡಿದ್ದಾರೆ.

ಬೆಳಗಾವಿ ನಿವಾಸಿಗಳ ಬಹುದಿನಗಳ ಬೇಡಿಕೆಯಾಗಿದ್ದ ಬೆಳಗಾವಿ – ಮಿರಜ್ ಬೆಳಗಾವಿ ನಡುವೆ ತಾತ್ಕಾಲಿಕವಾಗಿ ಸಂಚರಿಸುತ್ತಿದ್ದು ರೈಲು ಸೇವೆಯನ್ನು ಹುಬ್ಬಳ್ಳಿ ನೈರುತ್ಯ ರೇಲ್ವೆ ವಲಯವು ಇದೆ 15 ರಿಂದ ಖಾಯಂ ಆಗಿ ಸಂಚರಿಸುವಂತೆ ಸೇವೆಯನ್ನು ಒದಗಿಸಲಾಗಿದೆ ಎಂದು ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.

ಬೆಳಗಾವಿ – ಮಿರಜ್ – ಬೆಳಗಾವಿ ನಡುವೆ ಈ ರೈಲು ಬೆಳಗಾವಿ ( ರೈಲು ಸಂಖ್ಯೆ: 51461) ಯನ್ನು ಬೆಳಿಗ್ಗೆ 5.45ಕ್ಕೆ ಬಿಟ್ಟು ಮಿರಜನ್ನು ಬೆಳ್ಳಗ್ಗೆ 9 ಗಂಟೆಗೆ ತಲುಪಿ ಪುನಃ ಮಿರಜ್ ನಿಂದ ( ರೈಲು ಸಂಖ್ಯೆ: 51462 ) ಬೆಳಿಗ್ಗೆ 9.55ಕ್ಕೆ ಹೊರಟು ಮಧ್ಯಾಹ್ನ 1.10 ಕ್ಕೆ ಬೆಳಗಾವಿಯನ್ನು ತಲುಪಲಿದೆ.

ಅದರಂತೆ ಇದೆ ರೈಲು ಬೆಳಗಾವಿ ( ರೈಲು ಸಂಖ್ಯೆ: 51463) ಯನ್ನು ಮಧ್ಯಾಹ್ನ 13.30ಕ್ಕೆ ಬಿಟ್ಟು ಮಿರಜ ನ್ನು ಸಂಜೆ 16.30 ಕ್ಕೆ ತಲುಪಿ ಪುನಃ ಮಿರಜ್ ನಿಂದ ( ರೈಲು ಸಂಖ್ಯೆ: 51441) ಸಂಜೆ 19.10 ಕ್ಕೆ ಬಿಟ್ಟು ಬೆಳಗಾವಿಯನ್ನು ರಾತ್ರಿ 22.25 ಕ್ಕೆ ತಲುಪಲಿದೆ.

ಸಾರ್ವಜನಿಕರ ಬೇಡಿಕೆಯಂತೆ ಹಲವಾರು ಸಾರಿ ಕೇಂದ್ರ ರೇಲ್ವೆ ಸಚಿವರಲ್ಲಿಯೂ ಹಾಗೂ ನೈರುತ್ಯ ರೇಲ್ವೆ ವಲಯ ಅಧಿಕಾರಿಗಳಲ್ಲಿ ಪ್ರಸ್ತಾಪಿಸಿದ್ದರ ಹಿನ್ನಲೆಯಲ್ಲಿ ಈ ರೈಲು ಸೇವೆಯನ್ನು ಒದಗಿಸಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.