ಮಹನೀಯರ‌ ನಾಮಫಲಕಗಳ ತೆರವು ಖಂಡಿಸಿ ಕರ್ನಾಟಕ ಸೇನಾ ಪಡೆ ಪ್ರತಿಭಟನೆ

Spread the love

ಮೈಸೂರು: ದಸರಾ ವಸ್ತುಪ್ರದರ್ಶನದ ಆವರಣದಲ್ಲಿ, ಕನ್ನಡ ನಾಡಿನ ನುಡಿ, ಪರಂಪರೆಗೆ ಮಹಾನ್ ಕೊಡುಗೆಗಳನ್ನು ನೀಡಿದ ಮಹನೀಯರನ್ನು ಸ್ಮರಿಸುವ ನಾಮಫಲಕಗಳನ್ನು ಕಿತ್ತು ಹಾಕಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಸದಸ್ಯರು ಪ್ರತಿಭಟನೆ ನಡೆಸಿದರು.

ನಾಡಿನ ಕಲೆ, ಸಂಸ್ಕೃತಿಯ ವೈಭವವನ್ನು ಸಾರುವ ಜತೆಗೆ ಇದನ್ನು ಆಸ್ವಾದಿಸಲು ಬರುವವರಿಗೆ ಕನ್ನಡ ನಾಡಿನ ಪರಂಪರೆಗೆ ಮಹಾನ್ ಕೊಡುಗೆಗಳನ್ನು ನೀಡಿದ ಮಹನೀಯರನ್ನು ಸ್ಮರಿಸುವ ನಾಮಫಲಕಗಳನ್ನು ಅಂದರೆ ಪುರಂದರದಾಸರು, ಕನಕದಾಸರು, ದರಾ ಬೇಂದ್ರೆ, ಕುವೆಂಪು, ಡಾ. ರಾಜಕುಮಾರ್ ವಿಕೃ ಗೋಕಾಕ್, ಟಿಎನ್ ಬಾಲಕೃಷ್ಣ, ಸಂಗೀತ ದಿಗ್ಗಜರುಗಳಾದ ವಾಸುದೇವಾಚಾರ್ಯ ಪಿಟೀಲು ಚೌಡಯ್ಯ ಇವರ ಹೆಸರುಗಳನ್ನು ಇಲ್ಲಿನ ರಸ್ತೆಗಳಿಗೆ ನಾಮಪಲಕಗಳಾಗಿ ಅಳವಡಿಸಲಾಗಿದೆ.

ಆದರೆ ಸರ್ಕಾರ ಈಗ ಏಕಾಏಕಿ ನಾಡಹಬ್ಬ ದಸರಾ ದಿನವೇ ನಮ್ಮ ಸಂಸ್ಕೃತಿ ಪರಂಪರೆ ಸಾಹಿತ್ಯಕ್ಕೆ ಮಹಾನ್ ಕೊಡುಗೆ ನೀಡಿರುವ ಮಹನೀಯರು ಗಳನ್ನು ಸ್ಮರಿಸುವ ನಾಮಫಲಕಗಳನ್ನು ಕಿತ್ತೆಸೆದು ವಿಕೃತಿ ಮೆರೆಯಲಾಗಿದೆ ಎಂದು ಪ್ರತಿಭಟನಾ ನಿರತರು ಕಿಡಿಕಾರಿದರು.

ಕೂಡಲೇ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರ ಕಿತ್ತು ಹಾಕಿರುವ ನಾಮಪಲಕಗಳನ್ನು ಅಳವಡಿಸಿ ನಾಡಿನ ಜನತೆಯ ಕ್ಷಮೆಯಾಚಿಸಬೇಕು ಎಂದು ಕರ್ನಾಟಕ ಸೇನಾ ಪಡೆ ವತಿಯಿಂದ ವಸ್ತು ಪ್ರದರ್ಶನದ ಅಧ್ಯಕ್ಷರಿಗೆ ಮನವಿ ನೀಡಲಾಯಿತು.

ಈ ಮನವಿಗೆ ಸ್ಪಂದಿಸಿದ ವಸ್ತು ಪ್ರದರ್ಶನದ ಅಧ್ಯಕ್ಷರು, ಸಂಜೆಯೊಳಗೆ ಹೆರಿಟೇಜ್ ಮಾದರಿಯಲ್ಲಿ ಉನ್ನತ ದರ್ಜೆಯ ನಾಮಫಲಕಗಳನ್ನು ಅಳವಡಿಸುವುದಾಗಿ ಭರವಸೆ ನೀಡಿದರು.

ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಕೃಷ್ಣಪ್ಪ, ಸುರೇಶ್ ಗೋಲ್ಡ್, ಪ್ರಭುಶಂಕರ್, ರಘು ಅರಸ್, ರಾಧಾಕೃಷ್ಣ ಹನುಮಂತಯ್ಯ ಅಕ್ಬರ್, ವಿಜಯೇಂದ್ರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.