ಮೈಸೂರು ಮಹಾಲಿಂಗ ಅವರಿಗೆ ಸುಗಮ ಸಂಗೀತ ರತ್ನ ಪ್ರಶಸ್ತಿ ಪ್ರದಾನ

Spread the love

ಮೈಸೂರು: ಖ್ಯಾತ ಜಾನಪದ ಮತ್ತು ಸುಗಮ ಸಂಗೀತ ಗಾಯಕರಾದ ಮೈಸೂರು ಮಹಾಲಿಂಗ ಎಂ ಅವರಿಗೆ ರಾಗತರಂಗ ಅಕಾಡೆಮಿಯು ಸುಗಮ ಸಂಗೀತ ರತ್ನ ಪ್ರಶಸ್ತಿ ನೀಡಿ ಗೌರವಿಸಿತು.

ಮೈಸೂರಿನ ರಾಗತರಂಗ ಅಕಾಡೆಮಿ ವತಿಯಿಂದ ಮೈಸೂರಿನ ಕಿರುರಂಗ ಮಂದಿರದಲ್ಲಿ ಚಲನಚಿತ್ರ ಗೀತೆಗಳ ಗಾನ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ ವೇಳೆ
ಸುಗಮ ಸಂಗೀತ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ‌ ಅವರಿಗೆ ಈ ಪ್ರಶಸ್ತಿ ನೀಡಲಾಯಿತು.

ಪ್ರಶಸ್ತಿ ಸ್ವೀಕರಿಸಿದ ಮೈಸೂರು ಮಹಾಲಿಂಗ. ಎಂ ಅವರು ಜೀವನದಿ ಚಲನಚಿತ್ರದ ಎಲ್ಲೋ ಯಾರೋ ಹೇಗೋ ಎಂಬ ಗೀತೆಯನ್ನು ಮನಮುಟ್ಟುವಂತೆ ಹಾಡಿ ಎಲ್ಲರನ್ನು ರಂಜಿಸಿದರು.

ಅಧ್ಯಕ್ಷರಾದ ಅನ್ನಪೂರ್ಣ ಶಂಕರ್ ಹಾಗೂ ಕಾರ್ಯದರ್ಶಿಗಳಾದ ರೂಪ ನೇತೃತ್ವ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸುಮಾರು 22ಕ್ಕೂ ಹೆಚ್ಚು ಗಾಯಕ ಗಾಯಕಿಯರು ಸುಮಾರು 35ಕ್ಕೂ ಹೆಚ್ಚು ಸುಮಧುರವಾದ ಚಲನಚಿತ್ರಗೀತೆಗಳನ್ನು ಹಾಡಿ ನೆರೆದಿದ್ದ ಸಭಿಕರನ್ನು ರಂಜಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ಮಲ್ಲಿಕಾರ್ಜುನಸ್ವಾಮಿ ಯವರು ಮಾತನಾಡಿ, ರಾಗ ಮತ್ತು ಸಂಗೀತದಿಂದ ಎಲ್ಲರಿಗೂ ಮನಶಾಂತಿಯ ಜೊತೆಗೆ ಆರೋಗ್ಯ ವೃದ್ಧಿಸುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಹಾಗೂ ನಿಕಟ ಪೂರ್ವ ಅಧ್ಯಕ್ಷರು ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸಿ ವಿ ಪಾರ್ಥ ಸಾರಥಿ‌ ಅವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ಡಾ. ನಾಗರಾಜ ವಿ ಬೈರಿ, ಕಾಂಗ್ರೆಸ್ ಮುಖಂಡರಾದ ಎನ್ ಎಂ ನವೀನ್,ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ರೇಖಾ ಭಾಗವಹಿಸಿದ್ದರು.

ಅಧ್ಯಕ್ಷೆ ಅನ್ನಪೂರ್ಣ ಶಂಕರ್ ಹಾಗೂ ಕಾರ್ಯದರ್ಶಿ ರೂಪ ನೇತೃತ್ವ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸುಮಾರು 22ಕ್ಕೂ ಹೆಚ್ಚು ಗಾಯಕ ಗಾಯಕಿಯರು ಸುಮಾರು 35ಕ್ಕೂ ಹೆಚ್ಚು ಸುಮಧುರವಾದ ಚಲನಚಿತ್ರಗೀತೆಗಳನ್ನು ಹಾಡಿ ಸಭಿಕರನ್ನು ರಂಜಿಸಿದರು.