ಉಜ್ಜೈನಿಯ ವಾಲ್ಮೀಕಿ ಧಾಮಕ್ಕೆ ಕಜಾಪ ರಾಜ್ಯಾಧ್ಯಕ್ಷ ಡಾ ಎಸ್ ಬಾಲಾಜಿ ಭೇಟಿ

Spread the love

ಉಜ್ಜಯಿನಿ,ಮಾ.4 : ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐ ಸಿ ಸಿ ಆರ್ ಸದಸ್ಯ ಡಾ ಎಸ್ ಬಾಲಾಜಿ ಅವರು ಜೈ ಮಹಾಕಾಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ದರ್ಶನ ಪಡೆದರು.

ನಂತರ 160 ಎಕರೆಯಲ್ಲಿ ನಿರ್ಮಾಣವಾಗಿರುವ ವಾಲ್ಮೀಕಿ ದಾಮ್ ಮಠಕ್ಕೆ ಭೇಟಿ ನೀಡಿ ಅಲ್ಲಿಯ ಮಠಾಧೀಶರು ಹಾಗೂ ರಾಜ್ಯಸಭಾ ಸದಸ್ಯರಾದ ಶ್ರೀ ಉಮೇಶ್ ನಾಥ್ ಮಹಾರಾಜರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದರು.

ಇದೇ ಸಂದರ್ಭದಲ್ಲಿ ಡಾ ಎಸ್ ಬಾಲಾಜಿ ಅವರು ಕರ್ನಾಟಕದ ಪರವಾಗಿ ಶ್ರೀ ಉಮೇಶ್ ನಾಥ್ ಮಹಾರಾಜರನ್ನು
ಗೌರವಿಸಿ ಅಭಿನಂದಿಸಿದರು.

ಈ ವೇಳೆ ಸ್ವಾಮೀಜಿ ಹಾಗೂ ಸಂಸದರಾದ ಶ್ರೀ ಉಮೇಶ್ ನಾಥ್ ಮಹಾರಾಜರು ಮಾತನಾಡಿ ಮಧ್ಯಪ್ರದೇಶ ಜಾನಪದ ಗೀತೆ ಪ್ರಕಾರಗಳಲ್ಲಿ ಧಾರ್ಮಿಕ ಭಾವನೆಗಳು ಅಡಗಿವೆ,ಸ್ಥಳೀಯ ದೇಸಿ ಕಲೆಗಳನ್ನು ಉಳಿಸುವ ಕಾರ್ಯಗಳಲ್ಲಿ ಮಧ್ಯಪ್ರದೇಶ ಸರಕಾರ ತೊಡಗಿದೆ ಎಂದು ತಿಳಿಸಿದರು.

ಇದೇ ವೇಳೆ ಮಧ್ಯ ಪ್ರದೇಶ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ರಾಕೇಶ್ ಶರ್ಮ ಮಾತನಾಡಿ ಒಕ್ಕೂಟದ ವತಿಯಿಂದ ಯುವ ಜನರಿಗೆ ದೇಶಿ ಕಲೆಗಳ ತರಬೇತಿಯನ್ನು ಪ್ರದರ್ಶನಕ್ಕೆ ವೇದಿಕೆಗಳನ್ನು ನೀಡಲಾಗುತ್ತಿದೆ,ಮುಂದೆ ಲೋಕ ಕಲಾ ಸಂಘಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಇಂಡೂರಿನ ಶ್ರೀ ನಿತೇಶ್ ದೂಬೆ, ಆರೋಗ್ಯ ಇಲಾಖೆಯ ತರುಣ್ ರಾಥೋಡ್, ಮಾತೃಭೂಮಿಯ ವಿನೋದ್ ಸೋನಿ, ಕರ್ನಾಟಕದ ಧಾರವಾಡ ಕನ್ನಡ ಜಾನಪದ ಪರಿಷತ್ ಕಾರ್ಯದರ್ಶಿ ಸದಾನಂದ ಎಮ್ ಉಪಸ್ಥಿತರಿದ್ದರು.